ADVERTISEMENT

ಚೀನಾ ಹೊಸ ವರ್ಷಾಚರಣೆ: ಗ್ರಾಮೀಣ ಭಾಗಗಳಿಗೆ ಲಕ್ಷಾಂತರ ಜನರ ಪಯಣ

​ಪ್ರಜಾವಾಣಿ ವಾರ್ತೆ
Published 19 ಜನವರಿ 2023, 14:10 IST
Last Updated 19 ಜನವರಿ 2023, 14:10 IST
   

ಶಾಂಘೈ: ಚೀನಾದ ನಗರ, ಪಟ್ಟಣಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನರು ಚಂದ್ರಮಾನ ಹೊಸ ವರ್ಷಾಚರಣೆ ಅಂಗವಾಗಿ ತಮ್ಮ ಸ್ವಗ್ರಾಮಗಳಿಗೆ ತೆರಳುತ್ತಿದ್ದಾರೆ.

ಕೋವಿಡ್‌ ಉಲ್ಬಣಿಸಿದರೆ ಪರಿಸ್ಥಿತಿ ನಿಭಾಯಿಸುವ ಸಾಮರ್ಥ್ಯ ಗ್ರಾಮೀಣ ಪ್ರದೇಶಗಳಿಗೆ ಇದೆಯೇ ಎಂಬ ಕುರಿತು ಆತಂಕವಾಗುತ್ತಿದೆ ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಹೇಳಿದ್ದರ ಹೊರತಾಗಿಯೂ ಸಾವಿರಾರು ಜನರು ತಮ್ಮ ಹಳ್ಳಿಗಳಿಗೆ ಪ್ರಯಾಣ ಮಾಡುತ್ತಿದ್ದಾರೆ.

ಜನವರಿ 7ರಿಂದ ಬುಧವಾರದ ವೇಳೆಗೆ ಸಮಾರು 48 ಕೋಟಿ ಜನರು ದೇಶದಾದ್ಯಂತ ವಿವಿಧ ಭಾಗಗಳಿಗೆ ಪ್ರಯಾಣಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಅಧಿಕ. ಬೀಜಿಂಗ್‌ ಮತ್ತು ಶಾಂಘೈನಂಥ ದೊಡ್ಡ ನಗರಗಳ ರೈಲು ನಿಲ್ದಾಣಗಳಲ್ಲಿ ಬುಧವಾರವೂ ಭಾರಿ ಸಂಖ್ಯೆಯಲ್ಲಿ ಪ್ರಯಾಣಿಕರು ನೆರೆದಿದ್ದರು.

ADVERTISEMENT

ಚೀನಾದ ಸಾರಿಗೆ ಪ್ರಾಧಿಕಾರವೊಂದು ಅಂದಾಜು ಮಾಡಿರುವ ಪ್ರಕಾರ, ಇದು ಜಗತ್ತನ ಅತಿ ದೊಡ್ಡ ಸಾಮೂಹಿಕ ಸಂಚಾರಗಳಲ್ಲಿ ಒಂದು. ಈ ತಿಂಗಳಿಂದ ಫೆಬ್ರುವರಿ ವೇಳೆಗೆ ಸುಮಾರು 200ಕ್ಕೂ ಹೆಚ್ಚು ಸುತ್ತುಗಳ ರಸ್ತೆ ಸಂಚಾರ ನಡೆಯಲಿದೆ.

ಕೋವಿಡ್‌ ಪ್ರಕರಣಗಳು ಹೆಚ್ಚಿರುವ ದೊಡ್ಡ ನಗರಗಳಿಂದಲೂ ಜನರು ಗ್ರಾಮೀಣ ಭಾಗಗಳಿಗೆ ಪ್ರಯಾಣಿಸುವ ಕಾರಣ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್‌ ಪ್ರಕರಣಗಳು ಉಲ್ಬಣಿಸುವ ನಿರೀಕ್ಷೆ ಇದೆ. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.