ADVERTISEMENT

ಪಪುವಾ ನ್ಯೂಗಿನಿಯಲ್ಲಿ ಭೂಕಂಪ: 1,000 ಮನೆಗಳು ನಾಶ

ಏಜೆನ್ಸೀಸ್
Published 25 ಮಾರ್ಚ್ 2024, 5:47 IST
Last Updated 25 ಮಾರ್ಚ್ 2024, 5:47 IST
 ಭೂಕಂಪ
ಭೂಕಂಪ    (ಪ್ರಾತಿನಿಧಿಕ ಚಿತ್ರ)

ಪೋರ್ಟ್‌ ಮೊರೆಸ್ಬಿ: ಪಪುವಾ ನ್ಯೂಗಿನಿಯ ಪ್ರವಾಹ ಪೀಡಿತ ಉತ್ತರ ಭಾಗದಲ್ಲಿ ಸಂಭವಿಸಿದ 6.9 ತೀವ್ರತೆಯ ಭೂಕಂಪದಿಂದಾಗಿ ಸುಮಾರು 1,000 ಮನೆಗಳು ನಾಶವಾಗಿವೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಭಾನುವಾರ ಬೆಳಿಗ್ಗೆ ಸಂಭವಿಸಿದ ಭೂಕಂಪವು ಈ ಪ್ರದೇಶದ ಬಹುಭಾಗದಲ್ಲಿ ಹಾನಿಯುಂಟುಮಾಡಿದೆ. ಈವರೆಗೆ ಅಂದಾಜು 1,000 ಮನೆಗಳು ನಾಶವಾಗಿವೆ. ತುರ್ತು ಕಾರ್ಯಾಚರಣೆ ಸಿಬ್ಬಂದಿ, ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಈಸ್ಟ್‌ ಸೆಪಿಕ್‌ ಗವರ್ನರ್‌ ಅಲನ್‌ ಬರ್ಡ್‌ ತಿಳಿಸಿದ್ದಾರೆ.

ಮೂವರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಅಂಬುಂಟಿ ಪಟ್ಟಣದ ಈಶಾನ್ಯಕ್ಕೆ ಸುಮಾರು 32 ಕಿ.ಮೀ ದೂರದಲ್ಲಿ ಹಾಗೂ 35 ಆಳದಲ್ಲಿ ಭೂಕಂಪವಾಗಿದೆ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.