ADVERTISEMENT

ಬಾಂಗ್ಲಾದೇಶ | ಢಾಕಾ ವಿಮಾನ ನಿಲ್ದಾಣದಲ್ಲಿ ಬೆಂಕಿ: ವಿಮಾನ ಕಾರ್ಯಾಚರಣೆ ಸ್ಥಗಿತ

ಪಿಟಿಐ
Published 18 ಅಕ್ಟೋಬರ್ 2025, 14:18 IST
Last Updated 18 ಅಕ್ಟೋಬರ್ 2025, 14:18 IST
<div class="paragraphs"><p>ಢಾಕಾದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೊ ಸಂಕೀರ್ಣದಲ್ಲಿ ಹೊತ್ತಿಕೊಂಡಿದ್ದ ಬೆಂಕಿ ನಂದಿಸುತ್ತಿದ್ದ ಅಗ್ನಿಶಾಮಕ ಸಿಬ್ಬಂದಿ</p></div>

ಢಾಕಾದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೊ ಸಂಕೀರ್ಣದಲ್ಲಿ ಹೊತ್ತಿಕೊಂಡಿದ್ದ ಬೆಂಕಿ ನಂದಿಸುತ್ತಿದ್ದ ಅಗ್ನಿಶಾಮಕ ಸಿಬ್ಬಂದಿ

   

– ಎಎಫ್‌ಪಿ ಚಿತ್ರ

ಢಾಕಾ: ಢಾಕಾದಲ್ಲಿರುವ ಹಜರತ್‌ ಶಾಹಜಲಾಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೊ ಸಂಕೀರ್ಣದಲ್ಲಿ ಶನಿವಾರ ಭಾರಿ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ ಎಲ್ಲಾ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. 

ADVERTISEMENT

ಬೆಂಕಿಯಿಂದಾಗಿ ವಿಮಾನ ನಿಲ್ದಾಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿತ್ತು. ಘಟನೆಯಲ್ಲಿ ಯಾವುದೇ ಸಾವು–ನೋವು ಉಂಟಾಗಿರುವ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ. 

‘ಶನಿವಾರ ಮಧ್ಯಾಹ್ನ ಬೆಂಕಿ ಹೊತ್ತಿಕೊಂಡಿತು. ಬೆಂಕಿ ನಂದಿಸಲು 12 ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿತ್ತು. ವಾಯುಪಡೆಯ ಅಗ್ನಿಶಾಮಕ ವಾಹನಗಳು ಸೇರಿದಂತೆ ಒಟ್ಟು 36 ವಾಹನಗಳು ಕಾರ್ಯಾಚರಣೆ ನಡೆಸಿವೆ’ ಎಂದು ಬಾಂಗ್ಲಾದೇಶದ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ. 

ಮುಂದಿನ ಆದೇಶ ಹೊರಡಿಸುವವರೆಗೆ ಎಲ್ಲಾ ವಿಮಾನಗಳ ಟೇಕ್‌–ಆಫ್‌ ಹಾಗೂ ಲ್ಯಾಂಡಿಂಗ್ ಅನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ನಮ್ಮ ಎಲ್ಲಾ ವಿಮಾನಗಳೂ ಸುರಕ್ಷಿತವಾಗಿವೆ ಎಂದು ಅದು ಹೇಳಿದೆ. 

ಘಟನೆ ವೇಳೆ ಇಲ್ಲಿ ಲ್ಯಾಂಡ್‌ ಆಗಬೇಕಿದ್ದ 9 ವಿಮಾನಗಳ ಮಾರ್ಗ ಬದಲಾಯಿಸಿ ಬೇರೆ ನಿಲ್ದಾಣಗಳಲ್ಲಿ ಇಳಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.