ADVERTISEMENT

ಅಫ್ಗಾನಿಸ್ತಾನದಲ್ಲಿ ಬೆಂಕಿ ಅವಘಡ; 100ಕ್ಕೂ ಹೆಚ್ಚು ತೈಲ ಟ್ಯಾಂಕರ್‌ಗಳು ನಾಶ

ಏಜೆನ್ಸೀಸ್
Published 14 ಫೆಬ್ರುವರಿ 2021, 9:41 IST
Last Updated 14 ಫೆಬ್ರುವರಿ 2021, 9:41 IST
ಅಫ್ಗಾನಿಸ್ತಾನದ ಇಸ್ಲಾಂ ಖಲ ಬಂದರಿನಲ್ಲಿ ಶನಿವಾರ ಸಂಜೆ ಕಾಣಿಸಿಕೊಂಡ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿರುವ ಅಗ್ನಿಶಾಮಕ ಸಿಬ್ಬಂದಿ
ಅಫ್ಗಾನಿಸ್ತಾನದ ಇಸ್ಲಾಂ ಖಲ ಬಂದರಿನಲ್ಲಿ ಶನಿವಾರ ಸಂಜೆ ಕಾಣಿಸಿಕೊಂಡ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿರುವ ಅಗ್ನಿಶಾಮಕ ಸಿಬ್ಬಂದಿ   

ಇಸ್ಲಾಂ ಖಲ: ಅಫ್ಗಾನಿಸ್ತಾನ ಮತ್ತು ಇರಾನ್‌ ಗಡಿ ಪ್ರದೇಶ ಬಳಿಯ ಬಂದರು ಪ್ರದೇಶದಲ್ಲಿ ಭಾರಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, 100ಕ್ಕೂ ಅಧಿಕ ತೈಲ ಟ್ಯಾಂಕರ್‌ಗಳು ಭಸ್ಮವಾಗಿವೆ.

‘ಇದು ಇರಾನ್‌ನೊಂದಿಗಿನ ಅಫ್ಗಾನಿಸ್ತಾನದ ಅತಿ ದೊಡ್ಡ ವ್ಯಾಪಾರವಾಗಿತ್ತು.ಆದರೆ ಈ ಬೆಂಕಿಅವಘಡದಿಂದಾಗಿ ಅಫ್ಗಾನಿಸ್ತಾನಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಹೇರತ್‌ನಿಂದ 120 ಕಿ.ಮೀ ದೂರದಲ್ಲಿರುವಇಸ್ಲಾಂಖಲ ಬಂದರಿನಲ್ಲಿ ಶನಿವಾರ ಸಂಜೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ಬೆಂಕಿಯನ್ನು ಭಾಗಶಃ ನಂದಿಸಲಾಗಿದ್ದು, ಈ ಬಗ್ಗೆ ತನಿಖೆ ಆರಂಭಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಇಸ್ಲಾಂಖಲವು ಅಫ್ಗಾನಿಸ್ತಾನದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. ಅಮೆರಿಕವು ಇರಾನ್‌ ಮೇಲೆ ನಿರ್ಬಂಧ ಹೇರಿದೆ. ಈ ನಡುವೆಯೂ ಅಫ್ಗಾನಿಸ್ತಾನವು ಅಮೆರಿಕದ ಅನುಮತಿ ಪಡೆದು ಇರಾನ್‌ನಿಂದ ತೈಲವನ್ನು ಆಮದು ಮಾಡಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.