ADVERTISEMENT

ಬ್ರಿಟನ್‌ : ಚಾರ್ಲ್ಸ್ ಚಿತ್ರವಿರುವ 50 ಪೆನ್ಸ್‌ ನಾಣ್ಯ ಬಿಡುಗಡೆ

ಪಿಟಿಐ
Published 8 ಡಿಸೆಂಬರ್ 2022, 13:12 IST
Last Updated 8 ಡಿಸೆಂಬರ್ 2022, 13:12 IST
ಚಾರ್ಲ್ಸ್‌
ಚಾರ್ಲ್ಸ್‌   

ಲಂಡನ್‌: ಬ್ರಿಟನ್ ರಾಜ 3ನೇ ಚಾರ್ಲ್ಸ್‌ ಚಿತ್ರವಿರುವ ಮೊದಲ 50 ಪೆನ್ಸ್‌ ನಾಣ್ಯಗಳನ್ನು ಗುರುವಾರ ಚಲಾವಣೆಗೆ ಬಿಡುಗಡೆ ಮಾಡಲಾಗಿದೆ. 74 ವರ್ಷದ ರಾಜನ ಚಿತ್ರವಿರುವ ನಾಣ್ಯದ ಹಿಂಬದಿಯಲ್ಲಿ ರಾಣಿ 2ನೇ ಎಲಿಜಬೆತ್‌ ಅವರ ಜೀವನ ಮತ್ತು ಪರಂಪರೆಯನ್ನು ಚಿತ್ರಿಸಲಾಗಿದೆ.

ಲಂಡನ್‌ನ ನಾಣ್ಯಗಳಲ್ಲಿ ಹೊಸ ಸೇರ್ಪಡೆ ಇದಾಗಿದ್ದು, ಅಂಚೆ ಕಚೇರಿಗಳಲ್ಲಿ ಹೊಸ ನಾಣ್ಯಗಳನ್ನು ಪಡೆಯಬಹುದಾಗಿದೆ. ಪ್ರಸ್ತುತ ಒಟ್ಟು 96 ಲಕ್ಷ ಪೆನ್ಸ್‌ ನಾಣ್ಯಗಳನ್ನು ಬಿಡುಗಡೆ ಮಾಡಲಾಗಿದೆ. ರಾಜನ ಚಿತ್ರವನ್ನು ಖ್ಯಾತ ಬ್ರಿಟಿಷ್‌ ಶಿಲ್ಪಿ ಮಾರ್ಟಿನ್‌ ಜೆನ್ನಿಂಗ್ಸ್‌ ಅವರು ರಚಿಸಿದ್ದು, ಇದಕ್ಕೆ ವೈಯಕ್ತಿಕವಾಗಿ ಚಾರ್ಲ್ಸ್‌ ಅವರೇ ಅನುಮೋದನೆ ನೀಡಿದ್ದರು.

ಸಂಪ್ರದಾಯದಂತೆ ರಾಜನ ಚಿತ್ರವು ಎಡಕ್ಕೆ ಮುಖ ಮಾಡಿದೆ. ಅಕ್ಟೋಬರ್‌ನಲ್ಲಿ ವೆಬ್‌ಸೈಟ್‌ನಲ್ಲಿ ಬಿಡುಗಡೆಯಾಗಿದ್ದ ನಾಣ್ಯದ ಸ್ಮರಣಾರ್ಥದ ಆವೃತ್ತಿ 24 ಗಂಟೆಗಳಲ್ಲಿ ದಾಖಲೆಯ ವೀಕ್ಷಣೆ ಕಂಡಿತ್ತು ಎಂದು ರಾಯಲ್ ಮಿಂಟ್‌ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.