ರೋಸ್‌ವೆಲ್ (ಅಮೆರಿಕ): ಅಮೆರಿಕದ ಮಿಲಿಟರಿ ಅಕಾಡೆಮಿಯಲ್ಲಿ ಸಿಖ್ ಮಹಿಳೆಯೊಬ್ಬರು ಯಶಸ್ವಿಯಾಗಿ ನಾಲ್ಕು ವರ್ಷಗಳ ಪದವಿ ಕೋರ್ಸ್ ಪೂರೈಸಿದ್ದಾರೆ. ಈ ಮೂಲಕ ವೆಸ್ಟ್ ಪಾಯಿಂಟ್‌ನಲ್ಲಿ ಇರುವ ಅಕಾಡೆಮಿ ಇತಿಹಾಸದಲ್ಲಿ ಹೊಸ ದಾಖಲೆ ಮಾಡಿದಂತಾಗಿದೆ.
ಸೆಕೆಂಡ್ ಲೆಫ್ಟಿನಂಟ್ ಅನ್ಮೋಲ್ ನಾರಂಗ್ ಅವರು ಜಾರ್ಜಿಯಾಗೆ ವಲಸೆ ಬಂದಿದ್ದ ಜನರ ಎರಡನೇ ಪೀಳಿಗೆಯಾಗಿದ್ದು, ರೋಸ್‌ವೆಲ್‌ನಲ್ಲಿಯೇ ಜನಿಸಿದ್ದರು. ಅವರು ಜಾರ್ಜಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಪದವಿಪೂರ್ವ ಪೂರೈಸಿದ್ದರು. ವೆಸ್ಟ್ ಪಾಯಿಂಟ್‌ನಲ್ಲಿ ಈಗ ನ್ಯೂಕ್ಲಿಯರ್ ಎಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಕೋರ್ಸ್ ಪೂರ್ಣಗೊಳಿಸಿದರು.
ರಕ್ಷಣಾ ಕ್ಷೇತ್ರದಲ್ಲಿ ಬೆಳವಣಿಗೆ ಕಾಣುವ ಗುರಿಯನ್ನು ಅವರು ಹೊಂದಿದ್ದಾರೆ.‘ನನ್ನ ಕನಸು ನನಸಾಗಿದ್ದಕ್ಕೆ ಖುಷಿಯಾಗುತ್ತಿದೆ’ ಎಂದು ಸ್ಥಳೀಯ ಸಿಖ್ ಸಂಘಟನೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.
ನಾರಂಗ್ ಅವರು ಈಗ ಲಾಟನ್‌ನಲ್ಲಿ ಇರುವ ಫೋರ್ಟ್ ಸಿಲ್‌ನಲ್ಲಿ ಬೇಸಿಕ್ ಆಫೀಸರ್ ಲೀಡರ್‌ಶಿಪ್ ಕೋರ್ಸ್ ತರಬೇತಿ ಪೂರ್ಣಗೊಳಿಸುವರು. ಬಳಿಕ ಅವರು ಜಪಾನ್‌ನ ಒಕಿನಾವಾದಲ್ಲಿ ತಮ್ಮ ವೃತ್ತಿಯನ್ನು ಆರಂಭಿಸುವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.