ADVERTISEMENT

ಅಮೆರಿಕ| ಚುನಾವಣೆಯ ಮೊದಲ ಚರ್ಚೆಗೆ ದಿನ ನಿಗದಿ: ಟ್ರಂಪ್‌–ಬಿಡೆನ್‌ ಮುಖಾಮುಖಿ

ಏಜೆನ್ಸೀಸ್
Published 28 ಜುಲೈ 2020, 1:48 IST
Last Updated 28 ಜುಲೈ 2020, 1:48 IST
ಟ್ರಂಪ್‌ ಮತ್ತು ಬಿಡೆನ್‌
ಟ್ರಂಪ್‌ ಮತ್ತು ಬಿಡೆನ್‌   

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮೊದಲ ಚರ್ಚೆ ಸೆಪ್ಟೆಂಬರ್ 29 ರಂದು ಓಹಿಯೋದ ಕ್ಲೀವ್‌ಲ್ಯಾಂಡ್‌ನಲ್ಲಿ ನಡೆಯಲಿದೆ ಎಂದು ಅಧ್ಯಕ್ಷೀಯ ಚರ್ಚೆಗಳ ಆಯೋಗ (ಸಿಪಿಡಿ) ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.

‘ಅಧ್ಯಕ್ಷೀಯ ಚುನಾವಣೆಯ ಮೊದಲ ಚರ್ಚೆಯು ‘ಕೇಸ್ ವೆಸ್ಟರ್ನ್ ರಿಸರ್ವ್ ಯೂನಿವರ್ಸಿಟಿ’ ಮತ್ತು ‘ಕ್ಲೀವ್‌ಲ್ಯಾಂಡ್‌ ಕ್ಲಿನಿಕ್‌ಗಳ’ ಆತಿಥ್ಯದಲ್ಲಿ ನಡೆಯಲಿದೆ. ಕಾರ್ಯಕ್ರಮವು ಕ್ಲೀವ್‌ಲ್ಯಾಂಡ್‌ನಲ್ಲಿರುವ ಆರೋಗ್ಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ (ಎಚ್ಇಸಿ) ನಲ್ಲಿ ಆಯೋಜನೆಗೊಳ್ಳಲಿದೆ ಎಂದು ತಿಳಿಸಲು ಹರ್ಷವಾಗಿದೆ’ ಎಂದು ಸಿಪಿಡಿ ತಿಳಿಸಿದೆ.

ಈ ಚರ್ಚೆಯಲ್ಲಿ ಅಮೆರಿಕದ ಹಾಲಿ ಅಧ್ಯಕ್ಷ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬಿಡೆನ್‌ ಮುಖಾಮುಖಿಯಾಗಲಿದ್ದಾರೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳು ನವೆಂಬರ್‌ 3ರಂದು ನಡೆಯಲಿವೆ.

ADVERTISEMENT

ಟ್ರಂಪ್ ಮತ್ತು ಬಿಡೆನ್ ನಡುವಿನ ಎರಡನೇ ಚರ್ಚೆಯು ಅಕ್ಟೋಬರ್ 15 ರಂದು ಫ್ಲೋರಿಡಾದ ಮಿಯಾಮಿಯ ‘ಆಡ್ರಿಯೆನ್ ಆರ್ಶ್ಟ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ’ ನಡೆಯಲಿದೆ. ಮೂರನೇ ಚರ್ಚೆ ಅಕ್ಟೋಬರ್ 22 ರಂದು ಟೆನ್ನಿಸ್ಸೀನ ನ್ಯಾಶ್‌ವಿಲ್ಲೆಯಲ್ಲಿರುವ ಬೆಲ್ಮಾಂಟ್ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ ಎಂದು ಸಿಪಿಡಿ ತಿಳಿಸಿದೆ.

ಎಲ್ಲಾ ಚರ್ಚೆಗಳು 90 ನಿಮಿಷಗಳ ಕಾಲ ಜಾಹೀರಾತು ರಹಿತವಾಗಿ ರಾತ್ರಿ 9 ರಿಂದ ರಾತ್ರಿ 10: 30 ರವರೆಗೆ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.