ಸೆರಾ ಮುಲ್ಲಲಿ
ಕೃಪೆ: ಎಕ್ಸ್ / @wabbey
ಲಂಡನ್: ಮೊಟ್ಟ ಮೊದಲ ಬಾರಿಗೆ ಮಹಿಳಾ ಆರ್ಚ್‌ಬಿಷಪ್ ನೇಮಕ ಮಾಡುವ ಮೂಲಕ ಚರ್ಚ್ ಆಫ್ ಇಂಗ್ಲೆಂಡ್ ಇತಿಹಾಸ ನಿರ್ಮಾಣ ಮಾಡಿದೆ. ಕ್ಯಾಂಟರ್‌ಬರಿ ಚರ್ಚ್‌ನ ಆರ್ಚ್‌ಬಿಷಪ್ ಆಗಿ ಸೆರಾ ಮುಲ್ಲಲಿ ಅವರನ್ನು ಶುಕ್ರವಾರ ಘೋಷಣೆ ಮಾಡಲಾಗಿದೆ.
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಗುರಿಯಾಗಿ ರೆವರೆಂಡ್ ಜಸ್ಟಿನ್ ವಿಲ್ಬೆ ಅವರು ಕಳೆದ ವರ್ಷ ರಾಜೀನಾಮೆ ನೀಡಿದ್ದರಿಂದ ಈ ಸ್ಥಾನ ತೆರವಾಗಿತ್ತು. ಸೆರಾ ಅವರು 2018ರಿಂದ ಅವರು ಬಿಷಪ್ ಆಗಿದ್ದರು.
106ನೇ ಆರ್ಚ್‌ಬಿಷಪ್ ಆಗಿ ಸೆರಾ ಅವರ ನೇಮಕಕ್ಕೆ ಮೂರನೇ ಕಿಂಗ್ ಚಾರ್ಲ್ಸ್ ಅಧಿಕೃತ ಒಪ್ಪಿಗೆ ನೀಡಿದ್ದರು. ಶುಶ್ರೂಷಕಿಯಾಗಿದ್ದ ಸೆರಾ ಅವರ ನೇಮಕವನ್ನು ಇಂಗ್ಲೆಂಡ್ ಪ್ರಧಾನಿ ಕೀರ್ ಸ್ಟಾರ್ಮರ್ ಸ್ವಾಗತಿಸಿದ್ದಾರೆ.
63 ವರ್ಷದ ಸೆರಾ 106ನೇ ಆರ್ಚ್‌ಬಿಷಪ್ ಆಗಲಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ಅವರ ನೇಮಕವನ್ನು ದೃಢೀಕರಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.