ADVERTISEMENT

ಜಪಾನ್‌ ಜಲಾಂತರ್ಗಾಮಿ ಅಕಾಡೆಮಿಗೆ ಮಹಿಳೆ

ಏಜೆನ್ಸೀಸ್
Published 22 ಜನವರಿ 2020, 20:15 IST
Last Updated 22 ಜನವರಿ 2020, 20:15 IST

ಟೋಕಿಯೊ: ಜಪಾನಿನ ರಾಷ್ಟ್ರೀಯ ನೌಕಾಪಡೆಯ ಜಲಾಂತರ್ಗಾಮಿ ಅಕಾಡೆಮಿಗೆ ದಾಖಲಾತಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆಸಾಕಿ ಟಕೆನೌಚಿ ಎನ್ನುವವರು ಪಾತ್ರರಾಗಿದ್ದಾರೆ.

ಇದುವರೆಗೆ ಈ ಅಕಾಡೆಮಿಯಲ್ಲಿ ಮಹಿಳೆಯರ ದಾಖಲಾತಿಗೆ ನಿರ್ಬಂಧವಿತ್ತು. ಇತ್ತೀಚೆಗಷ್ಟೇ ಜಪಾನಿನ ಕಡಲತೀರದ ಸಂರಕ್ಷಣಾ ಪಡೆ ಈ ನಿರ್ಬಂಧವನ್ನು ಸಡಿಲಿಸಿತ್ತು.

ಹಿರೋಶಿಮಾ ಪ್ರಾಂತ್ಯದಲ್ಲಿರುವ ಅಕಾಡೆಮಿಗೆ ಸಾಕಿ ಟಕೆನೌಚಿ 20 ವಿದ್ಯಾರ್ಥಿಗಳೊಂದಿಗೆ ಸೇರ್ಪಡೆಯಾದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.