ADVERTISEMENT

ನಾಸಾದ ಚಂದ್ರಯಾನ ಕಾರ್ಯಕ್ರಮಕ್ಕೆ 18 ಜನರ ಆಯ್ಕೆ

ಏಜೆನ್ಸೀಸ್
Published 10 ಡಿಸೆಂಬರ್ 2020, 8:20 IST
Last Updated 10 ಡಿಸೆಂಬರ್ 2020, 8:20 IST
ನಾಸಾ ಲಾಂಛನ
ನಾಸಾ ಲಾಂಛನ   

ಕೇಪ್‌ಕೆನವೆರಲ್‌, ಅಮೆರಿಕ: 2024ಕ್ಕೆ ಚಂದ್ರಯಾನ ಕಾರ್ಯಕ್ರಮಕ್ಕೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ 18 ಗಗನಯಾನಿಗಳನ್ನು ಆಯ್ಕೆ ಮಾಡಿದ್ದು, ಇದರಲ್ಲಿ ಅರ್ಧದಷ್ಟು ಮಹಿಳೆಯರು ಇರುವುದು ಗಮನಾರ್ಹ.

‘ಆರ್ಟೆಮಿಸ್‌’ ಹೆಸರಿನ ಈ ಕಾರ್ಯಕ್ರಮದಡಿ ಮಹಿಳಾ ಗಗನಯಾನಿಯೇ ಮೊದಲು ಚಂದ್ರನ ಮೇಲೆ ಕಾಲಿಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಫ್ಲಾರಿಡಾದಲ್ಲಿರುವ ಕೆನಡಿ ಸ್ಪೇಸ್‌ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯಾಷನಲ್‌ ಸ್ಪೇಸ್‌ ಕೌನ್ಸಿಲ್‌ನ ಚೇರಮನ್‌ ಸಹ ಆಗಿರುವ ಅಮೆರಿಕದ ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಅವರು ಚಂದ್ರಯಾನ ಹಾಗೂ ಈ ಗಗನಯಾನಿಗಳ ಕುರಿತು ಮಾಹಿತಿ ನೀಡಿದರು.

ADVERTISEMENT

‘ಭವಿಷ್ಯದ ಹೀರೊಗಳನ್ನು ನಾನು ನಿಮಗೆ ಪರಿಚಯಿಸುವೆ. ಅವರು ಮತ್ತೇ ಚಂದ್ರನ ಮೇಲೆ ತೆರಳುವರು, ಅದರಾಚೆಯ ಬಾಹ್ಯಾಕಾಶಕ್ಕೂ ಹೋಗುವರು’ ಎಂದು ಹೇಳಿದರು. ನಂತರ, ಐವರು ಗಗನಯಾನಿಗಳು, ಸಭಿಕರತ್ತ ಕೈ ಬೀಸುತ್ತಾ ವೇದಿಕೆ ಮೇಲೆ ನಿಂತು ಗಮನ ಸೆಳೆದರು.

‘ಈ ಚಂದ್ರಯಾನ ಕಾರ್ಯಕ್ರಮಕ್ಕೆ ಇನ್ನಷ್ಟೂ ಗಗನಯಾನಿಗಳು ಸೇರ್ಪಡೆಯಾಗುವರು’ ಎಂದು ನಾಸಾದ ಆಡಳಿತಾಧಿಕಾರಿ ಜಿಮ್‌ ಬ್ರೈಡೆನ್‌ಸ್ಟಿನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.