ADVERTISEMENT

ಹಾಂಗ್‌ಕಾಂಗ್‌: ಪ್ರತಿಭಟನೆ ನಿಷೇಧಕ್ಕೆ ಆಕ್ರೋಶ

13ನೇ ವಾರವೂ ಮುಂದುವರಿದ ಪ್ರತಿಭಟನೆ

ಏಜೆನ್ಸೀಸ್
Published 31 ಆಗಸ್ಟ್ 2019, 20:00 IST
Last Updated 31 ಆಗಸ್ಟ್ 2019, 20:00 IST
ಪ್ರತಿಭಟನೆ ನಿಷೇಧಿಸಿರುವ ಪೊಲೀಸರ ಕ್ರಮ ಖಂಡಿಸಿ ಶನಿವಾರ ಹಾಂಗ್‌ಕಾಂಗ್‌ನಲ್ಲಿ ಸೇರಿದ್ದ ಜನಸಮೂಹ
ಪ್ರತಿಭಟನೆ ನಿಷೇಧಿಸಿರುವ ಪೊಲೀಸರ ಕ್ರಮ ಖಂಡಿಸಿ ಶನಿವಾರ ಹಾಂಗ್‌ಕಾಂಗ್‌ನಲ್ಲಿ ಸೇರಿದ್ದ ಜನಸಮೂಹ   

ಹಾಂಗ್‌ಕಾಂಗ್: ಇಲ್ಲಿ ನಡೆಯುತ್ತಿರುವ ಸಾರ್ವಜನಿಕ ಪ್ರತಿ ಭಟನೆ ಶನಿವಾರ ಹೊಸರೂಪ ಪಡೆ ಯಿತು. ಪ್ರತಿಭಟನೆಯ ಮೇಲೆ ನಿಷೇಧ ಹೇರಿರುವ ಪೊಲೀಸರ ಕ್ರಮವನ್ನು ಖಂಡಿಸಿ ಸಾವಿರಾರು ಹೋರಾಟಗಾರರು ಬೀದಿಗಿಳಿದರು.

ಪ್ರಜಾಪ್ರಭುತ್ವದ ಪರ ಇಲ್ಲಿ 13ನೇ ವಾರವೂ ಪ್ರತಿಭಟನೆ ಮುಂದು ವರಿದಿದೆ. ರಾಜಕೀಯ ಅನಿಶ್ಚಿತತೆಗೆ ಕಾರಣವಾಗಿರುವ ಪ್ರತಿಭಟನೆಯೂ ಈಚೆಗೆ ಹಿಂಸೆಗೆ ತಿರುಗಿತ್ತು. ಹೀಗಾಗಿ ಭದ್ರತಾ ಕಾರಣ ನೀಡಿಪೊಲೀಸರು ಪ್ರತಿಭಟನೆಯನ್ನೇ ನಿಷೇಧಿಸಿದ್ದರು.

ಕಪ್ಪು ವರ್ಣದ ಟೀ ಶರ್ಟ್‌, ವರ್ಣಮಯ ಕೊಡೆಗಳನ್ನು ಹಿಡಿದಿದ್ದ ಅಸಂಖ್ಯ ಪ್ರತಿಭಟನೆಗಾರರು ರಸ್ತೆ ಗಿಳಿದರು. ‘ಹಾಂಗ್‌ಕಾಂಗ್ ನಮಗೆ ಬೇಕು. ಇದು ನಮ್ಮ ಕಾಲದ ಕ್ರಾಂತಿ’ ಎಂಬ ಘೋಷಣೆಗಳೊಂದಿಗೆ ಪ್ರಮುಖ ರಸ್ತೆಯಲ್ಲಿ ಗುಂಪುಗೂಡಿದರು.

ADVERTISEMENT

ಸಂಸತ್ತಿನ ಹೊರಗಡೆ ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಹಾಗೂ ಜಲಫಿರಂಗಿಯನ್ನು ಪ್ರಯೋಗಿ ಸಿದರು. ಬೀಜಿಂಗ್‌ ಬೆಂಬಲಿತ ನಾಯಕ ಕ್ಯಾರಿ ಲ್ಯಾಮ್ ಅವರ ಅಧಿಕೃತ ನಿವಾಸದ ಎದುರು ಗುಂಪೊಂದು ಹಾದುಹೋಯಿತು. ಚೀನಾಗೆ ಹಸ್ತಾಂತರಿಸುವುದಕ್ಕೆ ಅವಕಾಶ ಕಲ್ಪಿಸುವ ವಿವಾದಿತ ಮಸೂದೆಗೆ ಅನುಮೋದನೆ ಪಡೆಯಲು ಯತ್ನಿಸಿದ ಕಾರಣಕ್ಕೆ ಲ್ಯಾಮ್ ಅವರು ಪ್ರತಿಭಟನೆಯ ಕೇಂದ್ರ ಬಿಂದುವಾಗಿದ್ದು, ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಕ್ರಿಮಿನಲ್ ಹಾಗೂ ಗಂಭೀರ ಸ್ವರೂಪದ ಆರೋಪಿಗಳನ್ನು ವಿಚಾರಣೆಗಾಗಿ ಚೀನಾಗೆ ಒಪ್ಪಿಸಲು ಅವಕಾಶ ಕಲ್ಪಿಸುವ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಮತ್ತೊಂದು ದೊಡ್ಡ ಗುಂಪು ವಾಣಿಜ್ಯ ದಟ್ಟಣೆಯ ಕಾಸ್‌ವೇ ಬೇ ಜಿಲ್ಲಾ ಕೇಂದ್ರದಲ್ಲಿ ಪ್ರಮುಖ ರಸ್ತೆಯಲ್ಲಿ ಸೇರಿತು. ಪ್ರತಿಭಟನಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪೊಲೀಸರು ಹೆಲಿಕಾಪ್ಟರ್‌ ಮೂಲಕ ಚಲನವಲನಗಳನ್ನು ಗಮನಿಸಿದ್ದು, ತಕ್ಷಣವೇ ಸ್ಥಳದಿಂದ ನಿರ್ಗಮಿಸಬೇಕು ಎಂದು ಪ್ರತಿಭಟನಕಾರರಿಗೆ ತಾಕೀತು ಮಾಡಿದರು.

‘ನಮ್ಮ ಪಾಲಿಗೆ ಹಾಂಗ್‌ಕಾಂಗ್ ಈಗಿಲ್ಲದಿದ್ದರೆ, ಇನ್ನೆಂದೂ ಇಲ್ಲ, ನಾವು ಯಾವುದೇ ಪರಿಣಾಮ ಎದುರಿಸಲು ಸಿದ್ಧ’ ಎಂದು 33 ವರ್ಷದ ವಾಂಗ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.