ADVERTISEMENT

ಭಾರತಕ್ಕೆ ಉತ್ತಮ ಗೆಳೆಯ ಬೇಕಾದರೆ ಟ್ರಂಪ್ ಅವರನ್ನು ಆಯ್ಕೆ ಮಾಡಿ: ಮನವಿ

ಭಾರತೀಯ ಅಮೆರಿಕನ್ ಸಮುದಾಯಕ್ಕೆ ಅಲ್ ಮೇಸನ್ ಮನವಿ

ಪಿಟಿಐ
Published 19 ಅಕ್ಟೋಬರ್ 2020, 7:31 IST
Last Updated 19 ಅಕ್ಟೋಬರ್ 2020, 7:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನ್ಯೂಯಾರ್ಕ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ’ಭಾರತದ ಉತ್ತಮ ಗೆಳೆಯ’ ಎಂದು ಬಣ್ಣಿಸಿದ ಭಾರತೀಯ ಅಮೆರಿಕನ್ನರ ಗುಂಪೊಂದು, ಈ ಬಾರಿಯ ಚುನಾವಣೆಯಲ್ಲಿ ಅವರನ್ನು ಮರು ಆಯ್ಕೆ ಮಾಡುವಂತೆ, ದೇಶದಾದ್ಯಂತ ನೆಲೆಸಿರುವ ಭಾರತೀಯ ಸಮುದಾಯದವರಲ್ಲಿ ಮನವಿ ಮಾಡಿದೆ.

’ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತೀಯ-ಅಮೆರಿಕನ್ ಸಮುದಾಯ ಚುನಾವಣೆಗೆ ಪರಿಗಣಿಸುವಷ್ಟು ಶಕ್ತಿಯಾಗಿ ಹೊರಹೊಮ್ಮಿದೆ’ ಎಂದು ಹೇಳಿದ ಟ್ರಂಪ್ ವಿಕ್ಟರಿ ಇಂಡಿಯನ್ ಅಮೆರಿಕನ್ ಹಣಕಾಸು ಸಮಿತಿಯ ಸಹ-ಅಧ್ಯಕ್ಷ ಅಲ್ ಮೇಸನ್ ಹೇಳಿದ್ದಾರೆ. ’ನಿಮ್ಮ ಬೆಂಬಲ ಅಧ್ಯಕ್ಷ ಟ್ರಂಪ್ ಅವರ ಗೆಲುವಿಗೆ ನೆರವಾಗುತ್ತದೆ’ ಎಂದು ಅವರು ಹೇಳಿದ್ದಾರೆ.

’ಇದು ಐತಿಹಾಸಿಕ ಚುನಾವಣೆ, ನಾವೆಲ್ಲರೂ ಸರಳವಾಗಿ ನಮ್ಮ ನಾಯಕರನ್ನು ಆಯ್ಕೆ ಮಾಡಬೇಕಾಗಿದೆ. ನಮಗೆ ಉತ್ತಮ ಆರ್ಥಿಕತೆ, ಕಡಿಮೆ ತೆರಿಗೆ ಮತ್ತು ಪುಟ್ಟದಾದ ಸರ್ಕಾರ ಬೇಕು. ಇವೆಲ್ಲದರ ಜತೆಗೆ, ಭಾರತದ ಜತೆಗೆ ಒಬ್ಬ ಉತ್ತಮ ಸ್ನೇಹಿತ ಬೇಕೆಂದು ಬಯಸುವುದಾದರೆ ಅಧ್ಯಕ್ಷ ಟ್ರಂಪ್ ಅವರನ್ನು ಮತ್ತೆ ಆಯ್ಕೆ ಮಾಡೋಣ’ ಎಂದು ಭಾರತದ ಖ್ಯಾತ ಉದ್ಯಮಿ ಚಿಂತು ಪಟೇಲ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.