ADVERTISEMENT

ಶ್ರೀಲಂಕಾ ಆರ್ಥಿಕ ದುಸ್ಥಿತಿ| ಬಿಕ್ಕಟ್ಟಿನಿಂದ ಹೊರಬರಲು ನೆರವು: ಭಾರತ ಭರವಸೆ

ಪಿಟಿಐ
Published 23 ಜೂನ್ 2022, 17:38 IST
Last Updated 23 ಜೂನ್ 2022, 17:38 IST
ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾಟ್ರಾ ಅವರು ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಜತೆ ಮಾತುಕತೆ ನಡೆಸಿದರು. ಈ ವೇಳೆ ಭಾರತದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್ ಸೇಠ್ ಮತ್ತು ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಸೇರಿದಂತೆ ಇತರರು ಇದ್ದರು -ಪಿಟಿಐ ಚಿತ್ರ
ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾಟ್ರಾ ಅವರು ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಜತೆ ಮಾತುಕತೆ ನಡೆಸಿದರು. ಈ ವೇಳೆ ಭಾರತದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್ ಸೇಠ್ ಮತ್ತು ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಸೇರಿದಂತೆ ಇತರರು ಇದ್ದರು -ಪಿಟಿಐ ಚಿತ್ರ   

ಕೊಲಂಬೊ:ಆರ್ಥಿಕ ದುಸ್ಥಿತಿಗೆ ಸಿಲುಕಿದ ಶ್ರೀಲಂಕಾಕ್ಕೆ ಹಣಕಾಸಿನ ನೆರವಿನ ಅಗತ್ಯವಿದೆಯೇ ಎಂಬ ಪರಿಶೀಲನೆಗೆ ಗುರುವಾರ ಇಲ್ಲಿಗೆ ಬಂದಿರುವ ಭಾರತ ಸರ್ಕಾರದ ನಿಯೋಗವು ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಜೊತೆ ಹಲವು ಮಹತ್ವದ ವಿಚಾರಗಳ ಚರ್ಚೆ ನಡೆಸಿದೆ.

ಈ ವೇಳೆರಾಜಪಕ್ಸ ಹಾಗೂ ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾಟ್ರಾ ಅವರು ಪರಸ್ಪರ ಚರ್ಚೆ ನಡೆಸಿದರು.

ಸಭೆಯ ಬಳಿಕ ಮಾತನಾಡಿದ ವಿನಯ್ ಕ್ವಾಟ್ರಾ ಅವರು, ‘ಶ್ರೀಲಂಕಾ ಅಧ್ಯಕ್ಷರ ಜೊತೆಗಿನ ಸಭೆಯು ಫಲಪ್ರದವಾಗಿತ್ತು. ಲಂಕಾ ಈ ಬಿಕ್ಕಟ್ಟಿನಿಂದ ಹೊರಬರಲು ಭಾರತ ಪೂರ್ಣ ಸಹಕಾರ ನೀಡಲಿದೆ’ ಎಂದು ಹೇಳಿದರು.

ADVERTISEMENT

ಭಾರತದ ಆರ್ಥಿಕ ಸಚಿವಾಲಯದ ಹಣಕಾಸು ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಅಜಯ್ ಸೇಠ್, ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಡಾ. ವಿ. ಅನಂತ ನಾಗೇಶ್ವರನ್ ಮತ್ತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹಿಂದೂ ಮಹಾಸಾಗರ ಪ್ರಾಂತ್ಯ(ಐಒಆರ್) ಜಂಟಿ ಕಾರ್ಯದರ್ಶಿ ಕಾರ್ತಿಕ್ ಪಾಂಡೆ ಅವರು ಸಹ ಈ ಸಭೆಯಲ್ಲಿ ಭಾಗವಹಿಸಿದ್ದರು.

ಶ್ರೀಲಂಕಾಕ್ಕೆ ಹೆಚ್ಚಿನ ಹಣಕಾಸು ನೆರವಿನ ಅಗತ್ಯವಿದೆಯೇ ಎಂಬ ಪರಿಶೀಲನೆಗೆ ಬಂದಿರುವಭಾರತದ ನಿಯೋಗವು, ಈಗಾಗಲೇ ನೀಡಿರುವ ಇಂಧನ, ವೈದ್ಯಕೀಯ, ರಸಗೊಬ್ಬರ ಸೇರಿದಂತೆ ಭಾರತ ನೀಡಿದ ಇನ್ನಿತರ ನೆರವುಗಳ ಬಗ್ಗೆ ಪರಿಶೀಲನೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.