ADVERTISEMENT

ಸ್ಪೇನ್‌ನಲ್ಲಿ ಕಾಳ್ಗಿಚ್ಚು

ಏಜೆನ್ಸೀಸ್
Published 29 ಜೂನ್ 2019, 19:10 IST
Last Updated 29 ಜೂನ್ 2019, 19:10 IST
ಸ್ಪೇನ್‌ನ ಟೊಲೆಡೊ ನಗರದ ಬಳಿ ಕಾಳ್ಗಿಚ್ಚು ನಿಯಂತ್ರಿಸಲು ಹೆಲಿಕಾಪ್ಟರ್‌ ಮೂಲಕ ನೀರು ಸಿಂಪಡಿಸಲಾಯಿತು ರಾಯಿಟರ್ಸ್‌ ಚಿತ್ರ
ಸ್ಪೇನ್‌ನ ಟೊಲೆಡೊ ನಗರದ ಬಳಿ ಕಾಳ್ಗಿಚ್ಚು ನಿಯಂತ್ರಿಸಲು ಹೆಲಿಕಾಪ್ಟರ್‌ ಮೂಲಕ ನೀರು ಸಿಂಪಡಿಸಲಾಯಿತು ರಾಯಿಟರ್ಸ್‌ ಚಿತ್ರ   

ಮ್ಯಾಡ್ರಿಡ್‌: ಯುರೋಪ್‌ ನಲ್ಲಿ ಉಷ್ಣಾಂಶ ವಿಪರೀತ ಏರಿಕೆಯಾಗಿ ಬಿಸಿಗಾಳಿ ಬೀಸುತ್ತಿರುವುದರಿಂದ ಸ್ಪೇನ್‌ನಲ್ಲಿ ಕಾಳ್ಗಿಚ್ಚು ಕಾಣಿಸಿ ಕೊಂಡಿದೆ. ಅಗ್ನಿ ಶಾಮಕ ಸಿಬ್ಬಂದಿ ಬರೋಬ್ಬರಿ 72 ಗಂಟೆಗಳ ಕಾಲ ಪ್ರಯತ್ನಿಸಿದ ಬಳಿಕ ಕಾಳ್ಗಿಚ್ಚು ಹತೋಟಿಗೆ ತರುವುದು ಸಾಧ್ಯವಾಯಿತು ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್‌ಮೊರೊಕ್ಸ್‌ನ ಕೇಂದ್ರ ನಗರದಲ್ಲಿ ಶುಕ್ರವಾರ ರಾತ್ರಿ ಕಾಣಿಸಿಕೊಂಡ ಕಾಳ್ಗಿಚ್ಚು ಸುಮಾರು 4 ಸಾವಿರ ಎಕರೆ ಪ್ರದೇಶವನ್ನು ಸುಟ್ಟು ಹಾಕಿದ್ದು, ಮ್ಯಾಡ್ರಿಡ್‌ ಪ್ರದೇಶದತ್ತ ಬೆಂಕಿಯ ಕೆನ್ನಾಲಗೆ ಚಾಚಿಕೊಂಡಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಮ್ಯಾಡ್ರಿಡ್‌ನ ನಾಗರಿಕರನ್ನು ಸ್ಥಳಾಂತರಿಸಬೇಕಾಯಿತು ಎಂದು ತುರ್ತು ಸೇವಾ ವಿಭಾಗ ತಿಳಿಸಿದೆ.

ಟೊಲೆಡೊ ನಗರದಿಂದ ಸುಮಾರು 60 ಕಿಮೀ ದೂರದಲ್ಲಿ ಮತ್ತೊಂದು ಕಾಳ್ಗಿಚ್ಚು ಕಾಣಿಸಿಕೊಂಡಿದ್ದು 22 ಮಂದಿ ನಾಗರಿಕರನ್ನು ಸ್ಥಳಾಂತರಿಸಲಾಗಿದೆ. ಹೆಲಿಕಾಪ್ಟರ್‌ ಮೂಲಕ ನೀರು ಸಿಂಪಡಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಕೆಟಲೋನಿಯಾ ಪ್ರದೇಶ ದಲ್ಲಿ ಬೆಂಕಿ ಹಿಡಿತಕ್ಕೆ ಬಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.