
ಪಿಟಿಐ
ಬಂಧನ
ಕೊಲಂಬೊ: ಶ್ರೀಲಂಕಾದ ಮಾಜಿ ಸಚಿವ ಡೌಗ್ಲಸ್ ದೇವಾನಂದ ಅವರಿಗೆ ಭದ್ರತೆಗಾಗಿ ನೀಡಲಾಗಿದ್ದ ಗನ್, ಭೂಗತ ಅಪರಾಧಿ ಬಳಿ ಪತ್ತೆಯಾಗಿತ್ತು. ಹೀಗಾಗಿ ವಿಚಾರಣೆ ನಡೆಸಲು ದೇವಾನಂದ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಪರಾಧಿಯನ್ನು 2020ರಲ್ಲಿ ದುಬೈನಿಂದ ಗಡೀಪಾರು ಮಾಡಲಾಗಿತ್ತು. ಬಳಿಕ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಸಾವಿಗೀಡಾದನು. ಈತನ ಬಳಿ ದೇವಾನಂದ ಅವರ ಗನ್ ಪತ್ತೆಯಾಗಿತ್ತು.
ಇಪಿಡಿಪಿ ಪಕ್ಷದ ನಾಯಕರಾಗಿರುವ ದೇವಾನಂದ 1994ರಿಂದ 2024ರವರೆಗೆ ಸಚಿವರಾಗಿ ವಿವಿಧ ಖಾತೆಗಳನ್ನು ನಿರ್ವಹಿಸಿದ್ದರು.
1986ರಲ್ಲಿ ಚೂಲೈಮೆಡುನಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ದೇವಾನಂದ ಅವರನ್ನು ಅಪರಾಧಿ ಎಂದು ಚೆನ್ನೈ ನ್ಯಾಯಾಲಯ ಘೋಷಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.