ADVERTISEMENT

ಹಾರ್ಕಿವ್‌ನಲ್ಲಿ ರಷ್ಯಾ ಪಡೆಗಳ ಶೆಲ್ ದಾಳಿಯಲ್ಲಿ ನಾಲ್ವರು ಸಾವು, 9 ಜನರಿಗೆ ಗಾಯ

ಏಜೆನ್ಸೀಸ್
Published 2 ಮಾರ್ಚ್ 2022, 16:01 IST
Last Updated 2 ಮಾರ್ಚ್ 2022, 16:01 IST
ಉಕ್ರೇನ್‌ನಲ್ಲಿ ರಷ್ಯಾದ ದಾಳಿ ನಂತರ ವಾಯು ರಕ್ಷಣಾ ನೆಲೆಯಿಂದ ಹೊಗೆ ಏರಿರುವುದು. (ಚಿತ್ರ- ಎಪಿ)
ಉಕ್ರೇನ್‌ನಲ್ಲಿ ರಷ್ಯಾದ ದಾಳಿ ನಂತರ ವಾಯು ರಕ್ಷಣಾ ನೆಲೆಯಿಂದ ಹೊಗೆ ಏರಿರುವುದು. (ಚಿತ್ರ- ಎಪಿ)   

ಹಾರ್ಕಿವ್: ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಶುರುವಾಗಿ ಇಂದಿಗೆ 7 ದಿನಗಳಾಗಿದ್ದು, ಬುಧವಾರ ಮುಂಜಾನೆ ಪೂರ್ವ ಉಕ್ರೇನ್‌ನ ನಗರವಾದ ಹಾರ್ಕಿವ್‌ನಲ್ಲಿ ನಡೆಸಿದ ಶೆಲ್ ದಾಳಿಯಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ ಮತ್ತು ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ ಸರ್ಕಾರ ತಿಳಿಸಿದೆ.

ಪ್ರಾಥಮಿಕ ಮಾಹಿತಿಯನ್ನು ಉಲ್ಲೇಖಿಸಿ ತುರ್ತು ಸೇವೆ ವಿಭಾಗ ಮಾಹಿತಿ ನೀಡಿದ್ದು, ರಷ್ಯಾ ದಾಳಿಯಿಂದಾಗಿ ನಾಲ್ವರು ಮೃತಪಟ್ಟು, ಒಂಬತ್ತು ಜನರು ಗಾಯಗೊಂಡಿದ್ದಾರೆ' ಎಂದಿದೆ.

ಬಹುಸಂಖ್ಯಾತ ಜನರು ರಷ್ಯನ್ ಭಾಷೆಯನ್ನಾಡುವ ಜನರಿರುವ ರಷ್ಯಾದ ಗಡಿಯಲ್ಲಿರುವ ಹಾರ್ಕಿವ್‌ನಲ್ಲಿ 1.4 ಮಿಲಿಯನ್ ಜನಸಂಖ್ಯೆಯಿದೆ.

ADVERTISEMENT

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇನಾ ಕಾರ್ಯಾಚರಣೆಗೆ ಆದೇಶ ನೀಡಿದಂದಿನಿಂದಲೂ ಈ ನಗರವನ್ನು ಗುರಿಯಾಗಿಸಿಕೊಂಡಿರುವ ರಷ್ಯಾ ಸೇನೆ, ಭೀಕರ ದಾಳಿ ನಡೆಸುತ್ತಲೇ ಬಂದಿದೆ.

'ರಷ್ಯಾದ ವಾಯು ಪಡೆಗಳು ಹಾರ್ಕಿವ್‌ನಲ್ಲಿ ಬಂದಿಳಿದವು. ಬಳಿಕ ಸ್ಥಳೀಯ ಆಸ್ಪತ್ರೆ ಮೇಲೆ ದಾಳಿ ಮಾಡಿದೆ. ಸದ್ಯ ಆಕ್ರಮಣಕಾರರು ಮತ್ತು ಉಕ್ರೇನಿಯನ್ನರ ನಡುವೆ ಹೋರಾಟ ನಡೆಯುತ್ತಿದೆ' ಎಂದು ಟೆಲಿಗ್ರಾಮ್‌ನಲ್ಲಿ ಕಳುಹಿಸಿದ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.