

ಪ್ಯಾರೀಸ್/ಫ್ರಾನ್ಸ್: ಯುಎಇಯಲ್ಲಿರುವ ತನ್ನ ನೌಕಾ ಹಾಗೂ ವಾಯುನೆಲೆಗಳನ್ನು ಇರಾನ್ ದಾಳಿಯಿಂದ ಸಂರಕ್ಷಿಸಲು ಫ್ರಾನ್ಸ್ ದೇಶವು ರಫೇಲ್ ಯುದ್ಧ ವಿಮಾನಗಳನ್ನು ನಿಯೋಜಿಸಿದೆ.
ಫ್ರಾನ್ಸ್ ವಿದೇಶಾಂಗ ಸಚಿವ ಜೀನ್ ನೋಯೆಲ್ ಬರೂತ್ ಮಂಗಳವಾರ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಫ್ರಾನ್ಸ್‌ನ ವಾಯುನೆಲೆ, ನೌಕಾನೆಲೆಯ ಸೌಲಭ್ಯಗಳು ಮಾತ್ರವಲ್ಲದೇ, ಫ್ರಾನ್ಸ್ ಸೇನೆಯ ನೂರಾರು ಸಿಬ್ಬಂದಿಯೂ ಯುಎಇಯಲ್ಲಿ ಇದ್ದಾರೆ.
ಹೀಗಾಗಿ ಫ್ರಾನ್ಸ್ ಸೌಲಭ್ಯಗಳಿರುವ ವಾಯುಪ್ರದೇಶದ ಸುರಕ್ಷತೆಯನ್ನು ಖಾತರಿಪಡಿಸಲು ಅಬುಧಾಬಿಯ ಅಲ್–ಧಫ್ರಾ ವಾಯುನೆಲೆಯಲ್ಲಿ ರಫೇಲ್‌ಗಳನ್ನು ನಿಯೋಜಿಸಲಾಗಿದೆ ಎಂದು ಜೀನ್ ತಿಳಿಸಿದ್ದಾರೆ.
ಯುಎಇಯಲ್ಲಿರುವ ಫ್ರೆಂಚ್ ವಾಯುನೆಲೆಯ ಮೇಲೆ ಭಾನುವಾರ ಡ್ರೋನ್‌ಗಳಿಂದ ದಾಳಿ ನಡೆದಿತ್ತು. ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.