ADVERTISEMENT

ಗ್ರೀನ್‌ಲ್ಯಾಂಡ್ ಮೇಲೆ ಟ್ರಂಪ್ ಕಣ್ಣು: ಆರ್ಥಿಕ ಸಂಬಂಧಕ್ಕೆ ಪೆಟ್ಟು ಎಂದ ಫ್ರಾನ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜನವರಿ 2026, 10:38 IST
Last Updated 16 ಜನವರಿ 2026, 10:38 IST
<div class="paragraphs"><p>ರೋಲ್ಯಾಂಡ್ ಲೆಸ್ಕ್ಯೂರ್</p></div>

ರೋಲ್ಯಾಂಡ್ ಲೆಸ್ಕ್ಯೂರ್

   

ಪ್ಯಾರಿಸ್: ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳುವ ಯಾವುದೇ ಕ್ರಮವು ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಆರ್ಥಿಕ ಸಂಬಂಧವನ್ನು ಹಾಳು ಮಾಡುತ್ತದೆ ಎಂದು ಫ್ರಾನ್ಸ್‌ ಹಣಕಾಸು ಸಚಿವ ರೋಲ್ಯಾಂಡ್ ಲೆಸ್ಕ್ಯೂರ್ ಅವರು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್‌ಗೆ ಎಚ್ಚರಿಕೆ ನೀಡಿದ್ದಾರೆ.

ಫೈನಾಶ್ಶಿಯಲ್ ಟೈಮ್ಸ್‌ನೊಂದಿಗೆ ಮಾತನಾಡಿದ ಅವರು, ‘ಗ್ರೀನ್‌ಲ್ಯಾಂಡ್ ಐರೋಪ್ಯ ಒಕ್ಕೂಟದಲ್ಲಿರುವ ಸಾರ್ವಭೌಮ ದೇಶದ ಭಾಗವಾಗಿದೆ. ಈ ವಿಷಯದಲ್ಲಿ ಗೊಂದಲ ಬೇಡ’ ಎಂದಿದ್ದಾರೆ.

ADVERTISEMENT

ಗ್ರೀನ್‌ಲ್ಯಾಂಡ್‌ ಮೇಲೆ ಆಕ್ರಮಣ ಮಾಡಿದರೆ ಅಮೆರಿಕದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ, ‘ಅಲ್ಲಿಯ ತನಕ ನಾವು ಹೋಗುವುದಿಲ್ಲ. ಅದು ಸಂಭವಿಸಿದ್ದೆ ಆಗಿದ್ದಲ್ಲಿ ನಾವು ಸಂಪೂರ್ಣವಾಗಿ ಹೊಸ ಜಗತ್ತಿನಲ್ಲಿರುತ್ತೇವೆ. ಅದಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕಾಗುತ್ತದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.