ಕೊಲಂಬೊ: ಶ್ರೀಲಂಕಾದಲ್ಲಿ ಸೋಮವಾರ ಮತ್ತೊಂದು ಬಾಂಬ್ ಸ್ಫೋಟ ಸಂಭವಿಸಿದ್ದು, ಸ್ಕಾಟ್ಲೆಂಡ್‌ನ ಧನಿಕ ಆಂಡೆರ್ಸ್ಸ್ಹಾಲ್ಚ್ ಪಾಲ್ಸೆನ್ (46) ಅವರ ಮೂವರು ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈಸ್ಟರ್ ರಜಾದಿನ ಕಳೆಯುವುದಕ್ಕಾಗಿ ಪಾಲ್ಸೆನ್ ಕುಟುಂಬ ಶ್ರೀಲಂಕಾಗೆ ಬಂದಿತ್ತು.
ಡೆನ್ಮಾರ್ಕ್ ಮೂಲದ ಪಾಲ್ಸೆನ್ ಸ್ಕಾಟ್ಲೆಂಡ್‌ನಲ್ಲಿ ಐತಿಹಾಸಿಕ ಎಸ್ಟೇಟ್‌ಗಳನ್ನು ಖರೀದಿ ಮಾಡುವ ಮೂಲಕ ಸ್ಕಾಟ್ಲೆಂಡ್‌ನ ಮಹಾಧನಿಕ ಎಂದೆನಿಸಿಕೊಂಡಿದ್ದರು.
ಕೊಲಂಬೊದ ಚರ್ಚ್‌ವೊಂದರ ಬಳಿ ವ್ಯಾನ್‍ನಲ್ಲಿ ಬಾಂಬ್ ಸ್ಫೋಟಿಸಿದ್ದು, ಸ್ಫೋಟದಲ್ಲಿ ಮೃತರಾದ ಮಕ್ಕಳ ಹೆಸರನ್ನು ಇಲ್ಲಿಯವರೆಗೆ ಬಿಡುಗಡೆ ಮಾಡಿಲ್ಲ. ಬಾಂಬ್ ನಿಷ್ಕ್ರಿಯಗೊಳಿಸುವ ವೇಳೆ ಈ ಸ್ಫೋಟ ಸಂಭವಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.