ADVERTISEMENT

ಜುಲೈ 16ರಂದು ಜಿ7 ರಾಷ್ಟ್ರಗಳ ಹಣಕಾಸು ಸಚಿವರ ಸಭೆ: ಜಪಾನ್

ರಾಯಿಟರ್ಸ್
Published 14 ಜುಲೈ 2023, 3:07 IST
Last Updated 14 ಜುಲೈ 2023, 3:07 IST
   

ಟೊಕಿಯೊ: ಭಾರತವು ಜಿ20 ಸಮಾವೇಶಕ್ಕೆ ಆತಿಥ್ಯ ವಹಿಸುತ್ತಿರುವ ಹೊತ್ತಿನಲ್ಲಿ ಜಿ7 ರಾಷ್ಟ್ರಗಳ ಹಣಕಾಸು ಸಚಿವರು ಜುಲೈ 16ರಂದು ಸಭೆ ನಡೆಸಲಿದ್ದಾರೆ ಎಂದು ಜಪಾನ್‌ ಹಣಕಾಸು ಸಚಿವ ಶುನಿಚಿ ಸುಜುಕಿ ಶುಕ್ರವಾರ ತಿಳಿಸಿದ್ದಾರೆ.

'ಜಿ7' ಗುಂಪಿನಲ್ಲಿ ಮುಂದುವರಿದ ದೇಶಗಳಾದ ಅಮೆರಿಕ, ಜಪಾನ್‌, ಬ್ರಿಟನ್‌, ಕೆನಡಾ, ಫ್ರಾನ್ಸ್‌, ಜರ್ಮನಿ ಹಾಗೂ ಇಟಲಿ ಇವೆ.

'ರಷ್ಯಾ ವಿರುದ್ಧ ಹೋರಾಡುತ್ತಿರುವ ಉಕ್ರೇನ್‌ಗೆ ಬೆಂಬಲ ನೀಡಿವುದು, ಎಂಡಿಬಿ (ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌) ಪುನಶ್ಚೇತನ ಮತ್ತು ಅಂತರರಾಷ್ಟ್ರೀಯ ಸಮಸ್ಯೆಗಳ ಕುರಿತು ಈ ಸಭೆಯಲ್ಲಿ ಚರ್ಚಿಸಲಾಗುತ್ತದೆ' ಎಂದು ಸುಜುಕಿ ಹೇಳಿದ್ದಾರೆ. ಹಾಗೆಯೇ, 'ಈ ಸಂಬಧ ಪ್ರಕಟಣೆ ಹೊರಡಿಸುವ ಯಾವುದೇ ಯೋಜನೆ ಇಲ್ಲ. ಆದರೆ, ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ' ಎಂದಿದ್ದಾರೆ.

ADVERTISEMENT

ಭಾರತದ ಆತಿಥ್ಯದಲ್ಲಿ ನಡೆಯುವ ಜಿ20 ಸಮಾವೇಶದಲ್ಲಿ, ಜಾಗತಿಕ ಆರ್ಥಿಕತೆ, ಆರೋಗ್ಯ, ಜಾಗತಿಕ ತೆರಿಗೆ ನೀತಿಗಳು, ಸುಸ್ಥಿರ ಹಣಕಾಸು ಮತ್ತು ಮೂಲಸೌಕರ್ಯ ವಿಚಾರಗಳು ಪ್ರತ್ಯೇಕವಾಗಿ ಚರ್ಚೆಯಾಗಲಿವೆ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.