ADVERTISEMENT

ಗಾಜಾ: ಹಳದಿ ಗೆರೆ ದಾಟಿದ ಬಸ್‌ಗೆ ಇಸ್ರೇಲ್ ಗುಂಡು; ಒಂದೇ ಕುಟುಂಬದ 9 ಮಂದಿ ಹತ್ಯೆ

ಪಿಟಿಐ
Published 18 ಅಕ್ಟೋಬರ್ 2025, 11:46 IST
Last Updated 18 ಅಕ್ಟೋಬರ್ 2025, 11:46 IST
<div class="paragraphs"><p>ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಯೋಧ</p></div>

ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಯೋಧ

   

– ರಾಯಿಟರ್ಸ್ ಚಿತ್ರ

ಗಾಜಾ: ಬಸ್ ಮೇಲೆ ಗುಂಡಿನ ದಾಳಿ ನಡೆಸಿದ ಇಸ್ರೇಲ್ ಪಡೆಯು ಶುಕ್ರವಾರ ಪ್ಯಾಲೆಸ್ಟೀನ್‌ನ ಒಂದೇ ಕುಟುಂಬದ 9 ಮಂದಿಯನ್ನು ಕೊಂದಿದೆ ಎಂದು ಗಾಜಾದ ನಾಗರಿಕ ರಕ್ಷಣಾ ಏಜೆನ್ಸಿ ಹೇಳಿದೆ.

ADVERTISEMENT

‘ನಾಗರಿಕ ರಕ್ಷಣಾ ಪಡೆಯ ಸಿಬ್ಬಂದಿ 9 ಮೃತದೇಹಗಳನ್ನು ಹೊರತೆಗೆದಿದ್ದಾರೆ’ ಎಂದು ಏಜೆನ್ಸಿಯ ವಕ್ತಾರ ಮಹ್ಮೂದ ಬಸ್ಸಾಲ್ ಹೇಳಿದ್ದಾರೆ.

ಮೃತರು ಅಬು ಶಾಬಾನ್ ಕುಟುಂಬದ ಸದಸ್ಯರಾಗಿದ್ದು, ಜೈತುನ್ ಪ್ರದೇಶದಲ್ಲಿ ತಮ್ಮ ಮನೆಯನ್ನು ಹುಡುಕಲು ಪ್ರಯತ್ನಿಸುತ್ತಿದ್ದಾಗ ದಾಳಿ ನಡೆದು ಮೃತಪಟ್ಟಿದ್ದಾರೆ ಎಂದು ಬಸ್ಸಾಲ್ ಹೇಳಿದ್ದಾರೆ.

ಹಮಾಸ್ ಜೊತೆಗಿನ ಕದನ ವಿರಾಮ ಒಪ್ಪಂದದ ಅಡಿಯಲ್ಲಿ ಇಸ್ರೇಲಿ ಪಡೆಗಳು ಬೀಡುಬಿಟ್ಟಿರುವ ಗಡಿಪ್ರದೇಶದ ‘ಹಳದಿ ರೇಖೆ’ಯನ್ನು ದಾಟುತ್ತಿದ್ದ ವಾಹನದ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ ಎಂದು ಇಸ್ರೇಲಿ ಮಿಲಿಟರಿ ತಿಳಿಸಿದೆ.

‘ಸೇನೆಯು ಅನುಮಾನಾಸ್ಪದ ವಾಹನದ ಕಡೆಗೆ ಎಚ್ಚರಿಕೆ ನೀಡಲು ಗುಂಡು ಹಾರಿಸಿತ್ತು. ಆದರೆ, ವಾಹನವು ಸೈನಿಕರ ಸನಿಹಕ್ಕೆ ಬರುತ್ತಲೇ ಇತ್ತು. ಬೆದರಿಕೆಯನ್ನುಂಟುಮಾಡುವ ರೀತಿಯಲ್ಲಿ ಸಮೀಪಿಸುತ್ತಿತ್ತು’ ಎಂದು ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.

ಒಪ್ಪಂದವನ್ನು ಮೀರಿ ಧಾವಿಸುತ್ತಿದ್ದ ವಾಹನದ ಮೇಲೆ ತಮ್ಮ ರಕ್ಷಣೆಗಾಗಿ ಸೈನಿಕರು ದಾಳಿ ಮಾಡಿದ್ದಾರೆ ಎಂದೂ ಹೇಳಿದೆ.

ಇಸ್ರೇಲಿ ಪಡೆಗಳು ಮತ್ತು ಹಮಾಸ್ ನಡುವಿನ ಕದನ ವಿರಾಮ ಈಗ ಎರಡನೇ ವಾರದಲ್ಲಿದೆ. ಆದರೆ, ಅದು ಆರಂಭವಾದ ಬಳಿಕವೂ ಹಲವು ಘಟನೆಗಳು ವರದಿಯಾಗಿವೆ. ಇಸ್ರೇಲ್ ಪಡೆಗಳು ಹಳದಿ ರೇಖೆಯನ್ನು ಸಮೀಪಿಸಿದ ಅಥವಾ ದಾಟಿದ ವ್ಯಕ್ತಿಗಳ ಮೇಲೆ ಗುಂಡು ಹಾರಿಸಿವೆ ಎಂದು ಇಸ್ರೇಲ್ ಹೇಳಿದೆ.

ಕದನ ವಿರಾಮ ಆರಂಭವಾದಾಗಿನಿಂದ ಲಕ್ಷಾಂತರ ಪ್ಯಾಲೆಸ್ಟೀನಿಯನ್ನರು ತಮ್ಮ ಮನೆಗಳನ್ನು ಹುಡುಕುತ್ತಾ ಉತ್ತರ ಗಾಜಾಗೆ ಮರಳಿದ್ದಾರೆ. ಎರಡು ವರ್ಷಗಳಿಗೂ ಹೆಚ್ಚು ಕಾಲದ ಯುದ್ಧದಿಂದ ಉಂಟಾದ ಅಪಾರ ವಿನಾಶದ ನಡುವೆ ಮನೆಗಳನ್ನು ಹುಡುಕಲು ಹೆಣಗಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.