ಡೊನಾಲ್ಡ್ ಟ್ರಂಪ್
ಶರ್ಮ್‌ಅಲ್ ಶೇಖ್: ಎರಡು ವರ್ಷಗಳ ಯುದ್ಧವನ್ನು ಕೊನೆಗೊಳಿಸುವ ಗುರಿ ಹೊಂದಿರುವ ಗಾಜಾ ಒಪ್ಪಂದದ ಘೋಷಣೆಗೆ ಖಾತರಿದಾರರಾಗಿ ಅಮೆರಿಕ, ಈಜಿಪ್ಟ್, ಕತಾರ್ ಹಾಗೂ ಟರ್ಕಿ ದೇಶಗಳು ಸೋಮವಾರ ಸಹಿ ಹಾಕಿದವು.
ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸುಧಾರಿಸುವ ಭಾಗವಾಗಿ ಗಾಜಾ ಭವಿಷ್ಯ ಕುರಿತು ನಡೆಯುತ್ತಿರುವ ಜಾಗತಿಕ ಶೃಂಗದಲ್ಲಿ ಈ ರಾಷ್ಟ್ರಗಳು ಸಹಿ ಹಾಕಿದವು.
‘ಈ ಘೋಷಣಾ ಪತ್ರವು ನಿಯಮ, ನಿಬಂಧನೆಗಳು ಹಾಗೂ ಇತರ ಹಲವು ವಿಷಯಗಳನ್ನು ವಿವರಿಸುತ್ತದೆ’ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಸಹಿ ಹಾಕುವ ಮುನ್ನ ಹೇಳಿದರು.
ಭಾರತ ಶ್ರೇಷ್ಠ ರಾಷ್ಟ್ರ: ‘ಭಾರತವು ಶ್ರೇಷ್ಠ ದೇಶವಾಗಿದ್ದು, ನನ್ನ ಉತ್ತಮ ಸ್ನೇಹಿತ ಅಗ್ರಸ್ಥಾನದಲ್ಲಿದ್ದಾರೆ’ ಎಂದು ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಉಲ್ಲೇಖಿಸದೆಯೇ ಶ್ಲಾಘಿಸಿದರು.
‘ಭಾರತ ಹಾಗೂ ಪಾಕಿಸ್ತಾನವು ಒಟ್ಟಿಗೆ ಸಾಗುತ್ತವೆ ಎಂದು ಭಾವಿಸುವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.