ಸಾಂದರ್ಭಿಕ-ಚಿತ್ರ
– ಎ.ಐ ಚಿತ್ರ
ಟೆಲ್ ಅವೀವ್: ಗಾಜಾಪಟ್ಟಿಯಲ್ಲಿರುವ ನಿರಾಶ್ರಿತರ ನೆರವು ವಿತರಣಾ ಕೇಂದ್ರದ ಬಳಿ ಕಾಲ್ತುಳಿತ ಸಂಭವಿಸಿ 20 ಮಂದಿ ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆಂದು ಗಾಜಾದಲ್ಲಿ ನೆರವು ಕಾರ್ಯಾಚರಣೆ ನಡೆಸುತ್ತಿರುವ ಇಸ್ರೇಲ್ ಬೆಂಬಲಿತ ಅಮೆರಿಕ ಮೂಲದ ಸಂಸ್ಥೆ ತಿಳಿಸಿದೆ.
ಖಾನ್ ಯೂನಿಸ್ ಪ್ರದೇಶದಲ್ಲಿರುವ ಕೇಂದ್ರದ ಬಳಿ ಕಾಲ್ತುಳಿತ ಸಂಭವಿಸಿ 19 ಮಂದಿ ಮೃತಪಟ್ಟಿದ್ದಾರೆ. ಅದೇ ಪ್ರದೇಶದಲ್ಲಿ ನಡೆದ ಸಂಘರ್ಷದ ವೇಳೆ ಚೂರಿ ಇರಿತದಿಂದ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.
ಅಲ್ಲದೇ, ನೆರವು ವಿತರಣಾ ಕೇಂದ್ರಗಳ ಬಳಿ ಪ್ರಕ್ಷುಬ್ಧತೆ ಸೃಷ್ಟಿಯಾಗುತ್ತಿದೆ. ಜನರನ್ನು ಬೆದರಿಸುವಂತಹ, ಹಾದಿತಪ್ಪಿಸುವಂತ ಸುಳ್ಳು ಮಾಹಿತಿಗಳನ್ನು ಹಮಾಸ್ ಹರಡುತ್ತಿರುವುದರಿಂದ ಜನರು ಗಾಬರಿಗೊಳ್ಳುತ್ತಿದ್ದಾರೆ. ಇದರಿಂದ ಕಾಲ್ತುಳಿತ, ಸಂಘರ್ಷದಂತಹ ಘಟನೆಗಳು ನಡೆಯುತ್ತಿವೆ ಎಂದೂ ಸಂಸ್ಥೆ ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.