ವಾಷಿಂಗ್ಟನ್: ಗಾಜಾ ಯುದ್ಧ ಅಂತ್ಯಗೊಂಡಿದೆ, ಮಧ್ಯಪ್ರಾಚ್ಯದಲ್ಲಿ ಸ್ಥಿರತೆ ನೆಲೆಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇಸ್ರೇಲ್‌ಗೆ ತೆರಳುವ ವೇಳೆ ಅವರು ಹೀಗೆ ಹೇಳಿದ್ದಾರೆ.
‘ಯುದ್ಧ ಮುಗಿದಿದೆ’ ಎಂದು ವಾಷಿಂಗ್ಟನ್‌ನಿಂದ ಇಸ್ರೇಲ್‌ಗೆ ‘ಏರ್‌ಫೋರ್ಸ್ ಒನ್’ನಲ್ಲಿ ಪ್ರಯಾಣಿಸುವ ಅವರು ವೇಳೆ ಹೇಳಿದ್ದಾರೆ. ಪ್ರದೇಶದ ಪರಿಸ್ಥಿತಿ ಬಗ್ಗೆ ಕೇಳಿದಾಗ, ‘ಸ್ಥಿರವಾಗಲಿದೆ ಎಂದು ಭಾವಿಸುವೆ’ ಎಂದು ಹೇಳಿದ್ದಾರೆ.
ಇಸ್ರೇಲ್ ಹಾಗೂ ಗಾಜಾ ನಡುವೆ ಶುಕ್ರವಾರ ಕದನ ವಿರಾಮ ಏರ್ಪಟ್ಟಿದ್ದು, ಇಸ್ರೇಲ್‌ನ ಒತ್ತೆಯಾಳುಗಳು ಹಾಗೂ ಗಾಜಾದ ಬಂಧಿತರ ಬಿಡುಗಡೆ ನಿರೀಕ್ಷೆ ಇದೆ.
ಒತ್ತೆಯಾಳುಗಳ ಹಾಗೂ ಬಂಧಿತರ ಬಿಡುಗಡೆ ಸೋಮವಾರ (ಇಂದು) ನಡೆಯುವ ಸಾಧ್ಯತೆ ಇದೆ.
ಕದನ ವಿರಾಮ ಘೋಷಣೆ ಬೆನ್ನಲ್ಲೇ, ಯುದ್ಧ ಅಂತ್ಯಗೊಳ್ಳುವ ನಿರೀಕ್ಷೆಯಿಂದ ಪ್ಯಾಲೆಸ್ಟೀನಿಯನ್ನರು ಉತ್ತರ ಗಾಜಾದ ಕಡೆ ತೆರಳಲು ಆರಂಭಿಸಿದ್ದಾರೆ. ಈ ಪ್ರದೇಶವನ್ನು ಗುರಿಯಾಗಿಸಿಕೊಂಡು ಕಳೆದೆರಡು ತಿಂಗಳಿನಿಂದ ಇಸ್ರೇಲ್ ದಾಳಿ ನಡೆಸುತ್ತಿತ್ತು.
‘ನಾಳೆಯಿಂದ ಹೊಸ ಹಾದಿ ತೆರೆಯಲಿದೆ. ಕಟ್ಟುವ, ಗುಣಪಡಿಸುವ ಹಾಗೂ ಹೃದಯಗಳನ್ನು ಬೆಸೆಯವ ಹಾದಿ’ ಎಂದು ಇಸ್ರೇಲ್ ಪ್ರಧಾನಿ ತಮ್ಮ ಟಿ.ವಿ ಭಾಷಣದಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.