ADVERTISEMENT

ವಿಶ್ವಸಂಸ್ಥೆ: ಥಾಯ್ಲೆಂಡ್‌ ಸ್ಥಾನಿಕ ಸಂಯೋಜಕರಾಗಿ ಗೀತಾ ಸಭರ್ವಾಲ್‌ ನೇಮಕ

ಪಿಟಿಐ
Published 30 ಜನವರಿ 2020, 20:00 IST
Last Updated 30 ಜನವರಿ 2020, 20:00 IST
   

ವಿಶ್ವಸಂಸ್ಥೆ : ಸಾಮಾಜಿಕ ನೀತಿ ಮತ್ತು ಶಾಂತಿ ಸ್ಥಾಪಿಸುವಲ್ಲಿ 20 ವರ್ಷಗಳ ಅನುಭವ ಹೊಂದಿರುವ ಭಾರತದ ಗೀತಾ ಸಭರ್ವಾಲ್‌ ಅವರನ್ನು ವಿಶ್ವಸಂಸ್ಥೆಯ ಥಾಯ್ಲೆಂಡ್‌ನ ಸ್ಥಾನಿಕ ಸಂಯೋಜಕರಾಗಿ ನೇಮಕ ಮಾಡಲಾಗಿದೆ.

ಸ್ಥಾನಿಕ ಸಂಯೋಜಕರು ವಿಶ್ವಸಂಸ್ಥೆಯ ಉನ್ನತ ಶ್ರೇಣಿಯ ಪ್ರತಿನಿಧಿಯಾಗಿದ್ದಾರೆ. ವಿಶ್ವಸಂಸ್ಥೆಯ 2030ರ ಕಾರ್ಯಸೂಚಿಯನ್ನು ಆಯಾ ದೇಶಗಳಲ್ಲಿ ಅನುಷ್ಠಾನಗೊಳಿಸುವಲ್ಲಿ ಸಹಕಾರ ನೀಡಲಿದ್ದಾರೆ. ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅಂಟೋನಿಯಾ ಗುಟೆರೆಸ್‌ ಈ ನೇಮಕ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT