ADVERTISEMENT

ರೂಬಲ್‌ ಅವರಿಗೆ ‘ಗ್ಲೋಬಲ್‌ ಟೀಚರ್‌’ ಪ್ರಶಸ್ತಿ ಪ್ರದಾನ

ಏಜೆನ್ಸೀಸ್
Published 5 ಫೆಬ್ರುವರಿ 2026, 14:34 IST
Last Updated 5 ಫೆಬ್ರುವರಿ 2026, 14:34 IST
ರೂಬಲ್‌ ನಾಗಿ
ರೂಬಲ್‌ ನಾಗಿ   

ದುಬೈ: ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದವರಿಗೆ ನೀಡುವ ‘ಗ್ಲೋಬಲ್‌ ಟೀಚರ್‌’ ಪ್ರಶಸ್ತಿಯನ್ನು ಭಾರತದ ಶಿಕ್ಷಕಿ ರೂಬಲ್‌ ನಾಗಿ ಅವರಿಗೆ ಗುರುವಾರ ಪ್ರದಾನ ಮಾಡಲಾಯಿತು.

ಪ್ರಶಸ್ತಿಯು ಒಂದು ಮಿಲಿಯನ್ ಡಾಲರ್ (ಅಂದಾಜು ₹9 ಕೋಟಿ) ನಗದು ಒಳಗೊಂಡಿದೆ. ರೂಬಲ್‌ ನಾಗಿ ಪ್ರತಿಷ್ಠಾನದಡಿ ಅವರು ಭಾರತದಾದ್ಯಂತ 800 ಕಲಿಕಾ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಕೊಳೆಗೇರಿಗಳ ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸಿ, ಅವುಗಳ ಮೂಲಕ ಸಾಹಿತ್ಯ, ವಿಜ್ಞಾನ, ಗಣಿತ ಹಾಗೂ ಇತಿಹಾಸದ ಪಾಠಗಳನ್ನು ಬೋಧಿಸುತ್ತಿದ್ದಾರೆ. 

‘ಶಾಲೆಗೆ ಹೋಗದ ಮಕ್ಕಳಿಗೆ ರಚನಾತ್ಮಕ ಕಲಿಕೆ ಪ್ರಾರಂಭಿಸುವುದು ನನ್ನ ಗುರಿಯಾಗಿದೆ. ಉಚಿತ ವೃತ್ತಿ ತರಬೇತಿ ಕೇಂದ್ರ ಸ್ಥಾಪಿಸಲು ಈ ಪ್ರಶಸ್ತಿ ಮೊತ್ತವನ್ನು ಬಳಸುವ ಯೋಜನೆ ಇದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ನಾಗಿ ಅವರು ‘ಗ್ಲೋಬಲ್‌ ಟೀಚರ್‌’ ಪ್ರಶಸ್ತಿ ಪಡೆಯುತ್ತಿರುವ 10ನೇ ವ್ಯಕ್ತಿಯಾಗಿದ್ದಾರೆ. 2015ರಲ್ಲಿ ಈ ಪ್ರಶಸ್ತಿಯನ್ನು ಆರಂಭಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.