
ಅಬುಜಾ(ನೈಜೀರಿಯಾ): ನೈಜೀರಿಯಾದ ಕ್ಯಾಥೋಲಿಕ್ ಶಾಲೆಯೊಂದರ ಮೇಲೆ ಶುಕ್ರವಾರ ದಾಳಿ ಮಾಡಿದ ಬಂದೂಕುಧಾರಿಗಳು 200ಕ್ಕೂ ಹೆಚ್ಚು ಶಾಲಾ ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ ಎಂದು ನೈಜೀರಿಯಾದ ಕ್ರಿಶ್ಚಿಯನ್ ಅಸೋಸಿಯೇಷನ್ ತಿಳಿಸಿದೆ.
ಅಗ್ವಾರ ಸ್ಥಳೀಯ ಸರ್ಕಾರದ ಪಾಪಿರಿ ಸಮುದಾಯದ ಸೇಂಟ್ ಮೇರಿ ಶಾಲೆಯ ಮೇಲೆ ದಾಳಿ ಮಾಡಿದ ಬಂದೂಕುಧಾರಿಗಳು 215 ವಿದ್ಯಾರ್ಥಿಗಳು ಹಾಗೂ 12 ಶಿಕ್ಷಕರನ್ನು ತಮ್ಮ ಹಿಡಿತದಲ್ಲಿಟ್ಟು ಅಪಹರಿಸಿದ್ದಾರೆ ಎಂದು ಸ್ಥಳಿಯ ಆಡಳಿತದ ವಕ್ತಾರ ಡೇನಿಯಲ್ ಅಟೋರಿ ಹೇಳಿದ್ದಾರೆ.
‘ನಾನು ಶಾಲೆಗೆ ಭೇಟಿ ನೀಡಿದ ನಂತರ ಮಕ್ಕಳ ಹಳ್ಳಿಗೂ ತೆರಳಿದ್ದೆ. ಅಲ್ಲಿ ನಾನು ಮಕ್ಕಳ ಪೋಷಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಮಕ್ಕಳನ್ನು ರಕ್ಷಿಸಲು ಮತ್ತು ಸುರಕ್ಷಿತವಾಗಿ ಕರೆತರುವ ಕುರಿತಂತೆ ನಾವು ಸರ್ಕಾರ ಮತ್ತು ಭದ್ರತಾ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಅವರಿಗೆ ಭರವಸೆ ನೀಡಿದ್ದೇನೆ’ಎಂದು ಅಟೋರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.