ಸಾವು
(ಪ್ರಾತಿನಿಧಿಕ ಚಿತ್ರ)
ಅಬುಜಾ, ನೈಜೀರಿಯಾ: ಬಂದೂಕುಧಾರಿಯೊಬ್ಬ ನೈಜೀರಿಯಾದ ವಾಯವ್ಯ ರಾಜ್ಯವಾದ ಜಾಮ್ಫಾರಾದ ಚಿನ್ನದ ಗಣಿ ಪ್ರದೇಶದ ಹಳ್ಳಿಯಲ್ಲಿ ಶುಕ್ರವಾರ ನಡೆಸಿದ ಗುಂಡಿನ ದಾಳಿಗೆ 28 ಜನ ಮೃತಪಟ್ಟಿದ್ದಾರೆ
ದಾಳಿಯಲ್ಲಿ ಹಲವು ಅಮಾಯಕರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ತಿಳಿಸಿದೆ.
ದಾನ್ ಗುಲ್ಬಿ ಜಿಲ್ಲೆಯ ಗೊಬ್ರಿವಾ ಚಾಲಿ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಬಂದೂಕುದಾರಿಯೊಬ್ಬ ಗ್ರಾಮಕ್ಕೆ ರಾತ್ರಿ ಬೈಕ್‌ನಲ್ಲಿ ನುಗ್ಗಿ ಮನೆ ಮನೆಗೆ ತೆರಳಿ ಯುವಕರು, ಮಹಿಳೆ ಮಕ್ಕಳನ್ನು ಕೊಂದಿದ್ದಾನೆ ಎಂದು ತಿಳಿಸಿದೆ. ದಾಳಿ ನಡೆಸಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ.
ಭದ್ರತೆ ಕಡಿಮೆ ಇರುವ ಈ ಪ್ರದೇಶದಲ್ಲಿನ ಹಳ್ಳಿಗಳ ಮೇಲೆ ಹಿಡಿತ ಸಾಧಿಸಲು ಶಸ್ತ್ರಧಾರಿಗಳ ಗುಂಪು ಆಗಾಗ ದಾಳಿ ನಡೆಸಿ ಅಮಾಯಕರನ್ನು ಹತ್ಯೆ ಮಾಡುತ್ತದೆ. ಇದರ ಬಗ್ಗೆ ನೈಜೀರಿಯಾ ಸರ್ಕಾರವೂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.