ADVERTISEMENT

ಅಮೆರಿಕದ ದಿನಸಿ ಮಳಿಗೆಯಲ್ಲಿ ಶೂಟೌಟ್: ಹಲವರ ಹತ್ಯೆ

ಏಜೆನ್ಸೀಸ್
Published 23 ಮಾರ್ಚ್ 2021, 3:47 IST
Last Updated 23 ಮಾರ್ಚ್ 2021, 3:47 IST
ಅಮೆರಿಕದ ದಿನಸಿ ಮಳಿಗೆಯೊಂದರಲ್ಲಿ ನಡೆದ ಶೂಟೌಟ್‌
ಅಮೆರಿಕದ ದಿನಸಿ ಮಳಿಗೆಯೊಂದರಲ್ಲಿ ನಡೆದ ಶೂಟೌಟ್‌   

ಬೋಲ್ಡರ್, ಯುಎಸ್: ಅಮೆರಿಕದ ಕೊಲೆರಾಡೊದಲ್ಲಿ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿ ಪೊಲೀಸ್ ಅಧಿಕಾರಿ ಸಹಿತ ಹಲವರನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೋಲ್ಡರ್‌ನ ಕಿಂಗ್ ಸೂಪರ್ಸ್ ಸ್ಟೋರ್‌ನಲ್ಲಿ ಈ ಕೃತ್ಯ ನಡೆದಿದ್ದು, ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಕಮಾಂಡರ್ ಕೆರ್ರಿ ಯಮಗುಚಿ ತಿಳಿಸಿದ್ದಾರೆ.

ಘಟನೆಯಲ್ಲಿ ಹಲವರು ಮೃತಪಟ್ಟಿದ್ದಾರೆ. ನಮ್ಮ ತಂಡದ ಪೊಲೀಸ್ ಅಧಿಕಾರಿಯೊಬ್ಬರು ಕೂಡ ಮೃತಪಟ್ಟಿದ್ದಾರೆ. ಒಟ್ಟು ಎಷ್ಟು ಜನರು ಸಾವನ್ನಪ್ಪಿದ್ದಾರೆ ಎನ್ನುವುದು ಖಚಿತವಾಗಿಲ್ಲ, ಶಂಕಿತ ಕೂಡ ಗಾಯಗೊಂಡಿದ್ದು, ಆತನನ್ನು ಬಂಧಿಸಿದ್ದೇವೆ ಎಂದು ಯಮಗುಚಿ ಹೇಳಿದ್ದಾರೆ.

ADVERTISEMENT

ಕನಿಷ್ಠ 6 ಮಂದಿ ಶೂಟೌಟ್ ಪ್ರಕರಣದಲ್ಲಿ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಅಮೆರಿಕದ ಮಧ್ಯಮಗಳು ವರದಿ ಮಾಡಿವೆ.

ಶೂಟೌಟ್ ಪ್ರಕರಣದ ಬಗ್ಗೆ ಕೊಲೆರಾಡೊ ಗವರ್ನರ್ ಜೇರ್ಡ್ ಪೊಲಿಸ್, ಬೋಲ್ಡರ್ ಮೇಯರ್ ಸ್ಯಾಮ್ ವೀವರ್ ಅಘಾತ ವ್ಯಕ್ತಪಡಿಸಿದ್ದು, ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.