ADVERTISEMENT

ಎಚ್‌–1ಬಿ ವಿಸಾ | ಸೆ. 21ರಿಂದಲೇ 1 ಲಕ್ಷ ಡಾಲರ್‌ ಶುಲ್ಕ ನಿಯಮ ಅನ್ವಯ: ಅಮೆರಿಕ

ಪಿಟಿಐ
Published 22 ಸೆಪ್ಟೆಂಬರ್ 2025, 15:42 IST
Last Updated 22 ಸೆಪ್ಟೆಂಬರ್ 2025, 15:42 IST
<div class="paragraphs"><p>ಎಚ್‌–1ಬಿ ವಿಸಾ</p></div>

ಎಚ್‌–1ಬಿ ವಿಸಾ

   

ನ್ಯೂಯಾರ್ಕ್‌/ವಾಷಿಂಗ್ಟನ್‌: 2026ನೇ ಆರ್ಥಿಕ ವರ್ಷದಲ್ಲಿ ವಿಸಾ ಪಡೆಯಲು ಅರ್ಜಿ ಸಲ್ಲಿಸಿರುವವರು ಸೇರಿದಂತೆ ಸೆಪ್ಟೆಂಬರ್‌ 21ರ ನಂತರ ಎಚ್‌–1ಬಿ ವಿಸಾಕ್ಕಾಗಿ ಅರ್ಜಿ ಸಲ್ಲಿಸುವವರು 1 ಲಕ್ಷ ಡಾಲರ್‌ (ಸುಮಾರು ₹88 ಲಕ್ಷ) ಶುಲ್ಕ ಪಾವತಿಸಬೇಕು ಎಂದು ಅಮೆರಿಕ ಸರ್ಕಾರ ತಿಳಿಸಿದೆ.

ಎಚ್‌–1ಬಿ ವಿಸಾ ಕುರಿತ ಪ್ರಶ್ನಾವಳಿ ಮತ್ತು ಉತ್ತರಗಳಿರುವ ಮಾಹಿತಿಯನ್ನು ಭಾನುವಾರ ಬಿಡುಗಡೆ ಮಾಡಿದ್ದು, ಅದರಲ್ಲಿ ಅಮೆರಿಕ ಉದ್ಯೋಗಿಗಳ ರಕ್ಷಣೆ ನಿಟ್ಟಿನಲ್ಲಿ ಎಚ್‌–1ಬಿ ವಿಸಾ ಸುಧಾರಣೆ ಮಹತ್ವದ ಮತ್ತು ಆರಂಭಿಕ ಹೆಜ್ಜೆ ಎಂದು ಹೇಳಲಾಗಿದೆ.

ADVERTISEMENT

ಸೆಪ್ಟೆಂಬರ್ 1ರ ಮಧ್ಯರಾತ್ರಿ 12:01ರಿಂದ ನೂತನ ನಿಯಮವು ಅನ್ವಯವಾಗಲಿದೆ ಎಂದು ಅದು ತಿಳಿಸಿದೆ.

ಎಚ್‌1 ಬಿ ವೀಸಾದ ಶುಲ್ಕವನ್ನು 1 ಲಕ್ಷ ಡಾಲರ್‌ಗೆ ಹೆಚ್ಚಿಸಿರುವುದು ಹೊಸ ಅರ್ಜಿಗಳಿಗೆ ಮಾತ್ರ ಅನ್ವಯವಾಗಲಿದೆ ಎಂದು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆ (ಯುಎಸ್‌ಸಿಐಎಸ್‌) ಏಜೆನ್ಸಿಯು ಶನಿವಾರ ಹೇಳಿಕೆಯಲ್ಲಿ ತಿಳಿಸಿತ್ತು. ಆದರೆ ಯಾವ ದಿನಾಂಕದಿಂದ ನೂತನ ನಿಯಮ ಅನುಷ್ಠಾನಗೊಳ್ಳಲಿದೆ ಎಂದು ಸ್ಪಷ್ಟವಾಗಿ ತಿಳಿಸಿರಲಿಲ್ಲ.

ಪ್ರತಿಕ್ರಿಯೆಗೆ ಚೀನಾ ನಕಾರ

ಬೀಜಿಂಗ್‌: ಎಚ್‌–1ಬಿ ವೀಸಾ ಪಡೆಯಲು ದುಬಾರಿ ಶುಲ್ಕ ವಿಧಿಸಿರುವ ಅಮೆರಿಕದ ನಡೆಯ ಬಗ್ಗೆ ಪ್ರತಿಕ್ರಿಯಿಸಲು ಚೀನಾ ನಿರಾಕರಿಸಿದೆ. ಆದರೆ, ಇದೇ ಸಂದರ್ಭದಲ್ಲಿ ಜಾಗತಿಕ ವೃತ್ತಿಪರರನ್ನು ಅದು ಆಹ್ವಾನಿಸಿದೆ. ಈ ಮಧ್ಯೆ, ಮುಂದಿನ ತಿಂಗಳಿನಿಂದ ನೂತನ ಉದ್ಯೋಗ ವೀಸಾ (ಕೆ–ವೀಸಾ) ವಿತರಿಸಲು ಅದು ಸಿದ್ಧತೆ ನಡೆಸಿದೆ. ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗುವೋ ಜ್ಯಾಕೂನ್‌ ಅವರು ‘ಅಮೆರಿಕದ ವೀಸಾ ನೀತಿ ಬಗ್ಗೆ ಚೀನಾ ಪ್ರತಿಕ್ರಿಸುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.