ದುಬೈ: ಹ್ಯಾಕರ್‌ಗಳ ಗುಂಪೊಂದು ಇರಾನ್‌ನ ಅತ್ಯಂತ ದೊಡ್ಡ ಕ್ರಿಪ್ಟೊ ಕರೆನ್ಸಿ ಎಕ್ಸ್‌ಚೇಂಜ್ ‘ನೋಬಿಟೆಕ್ಸ್’ ಅನ್ನು ಹ್ಯಾಕ್ ಮಾಡಿ, 90 ದಶಲಕ್ಷ ಡಾಲರ್ (ಅಂದಾಜು ₹781 ಕೋಟಿ) ನಷ್ಟು ಮೊತ್ತವನ್ನು ಖಾಲಿ ಮಾಡಿದೆ ಎಂದು ಮೂಲಗಳು ಹೇಳಿವೆ.
ಹ್ಯಾಕರ್‌ಗಳು ಇಸ್ರೇಲ್‌ನೊಂದಿಗೆ ನಂಟು ಹೊಂದಿರುವ ಸಾಧ್ಯತೆ ಇದೆ ಎಂದು ಬ್ಲಾಕ್‌ಚೈನ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಂಪನಿ ಎಲಿಪ್ಟಿಕ್ ಹೇಳಿದೆ.
ಕ್ರಿಪ್ಟೊ ಕರೆನ್ಸಿ ಎಕ್ಸ್‌ಚೇಂಜ್ ಹ್ಯಾಕ್ ಮಾಡಿರುವ ಕುರಿತು ಹ್ಯಾಕರ್‌ಗಳ ಗುಂಪು, ಸಾಮಾಜಿಕ ಮಾಧ್ಯಮ ‘ಟೆಲಿಗ್ರಾಮ್’ ಖಾತೆಯಲ್ಲಿ ಬರೆದುಕೊಂಡಿದೆ.
‘ತನ್ನ ಪರಮಾಣು ಕಾರ್ಯಕ್ರಮದ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಧಿಕ್ಕರಿಸಲು ಇರಾನ್ ಸರ್ಕಾರಕ್ಕೆ ನೋಬಿಟೆಕ್ಸ್ ಸಹಾಯ ಮಾಡಿದೆ ಹಾಗೂ ಹಣವನ್ನು ಉಗ್ರರಿಗೆ ವರ್ಗಾಯಿಸಿದೆ’ ಎಂದು ಹ್ಯಾಕರ್‌ಗಳ ಗುಂಪು ‘ಎಕ್ಸ್’ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಆರೋಪಿಸಿದೆ.
ಹ್ಯಾಕ್‌ಗೆ ಒಳಗಾಗಿರುವುದನ್ನು ನೋಬಿಟೆಕ್ಸ್ ಕೂಡ ಖಚಿತಪಡಿಸಿದೆ. ತನ್ನ ಆ್ಯಪ್ ಹಾಗೂ ವೆಬ್‌ಸೈಟ್ ಕಾರ್ಯಾಚರಣೆಯಲ್ಲಿ ತೊಂದರೆ ಕಂಡುಬಂದಿದೆ ಎಂದು ಅದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
‘ಹ್ಯಾಕ್ ಮೂಲಕ ಲಪಟಾಯಿಸಿರುವ ಹಣವನ್ನು ಇರಾನ್‌ನ ರೆವಲ್ಯೂಷನರಿ ಗಾರ್ಡ್ ವಿರುದ್ಧ ಟೀಕೆ ಮಾಡುತ್ತಿದ್ದ ವ್ಯಕ್ತಿ/ಗುಂಪುಗಳಿಗೆ ಸೇರಿದ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಈ ಕೃತ್ಯವು ಹಣಕ್ಕಾಗಿ ಮಾಡಿರುವುದಿಲ್ಲ. ನೋಬಿಟೆಕ್ಸ್‌ಗೆ ಬಲವಾದ ರಾಜಕೀಯ ಸಂದೇಶವೊಂದನ್ನು ಕಳುಹಿಸುವ ಉದ್ದೇಶದಿಂದ ಮಾಡಿದ್ದಾಗಿ’ ಎಂದೂ ಎಲಿಪ್ಟಿಕ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.