ADVERTISEMENT

ಹೈಟಿ | ಗ್ಯಾಂಗ್‌ಸ್ಟರ್‌ ಮಗುವಿನ ಮೇಲೆ ವಾಮಾಚಾರ ಆರೋಪ: 110 ಜನರ ಹತ್ಯೆ

ರಾಯಿಟರ್ಸ್
Published 9 ಡಿಸೆಂಬರ್ 2024, 4:29 IST
Last Updated 9 ಡಿಸೆಂಬರ್ 2024, 4:29 IST
<div class="paragraphs"><p>ಭದ್ರತೆಗೆ ನಿಂತಿರುವ ಸಿಬ್ಬಂದಿ</p></div>

ಭದ್ರತೆಗೆ ನಿಂತಿರುವ ಸಿಬ್ಬಂದಿ

   

ರಾಯಿಟರ್ಸ್‌ ಚಿತ್ರ

ಸ್ಯಾನ್‌ ಜುವಾನ್‌ (ಪೋರ್ಟೊ ರಿಕೊ): ಹೈಟಿ ದೇಶದ ಸಿಟಿ ಸೋಲೈಲ್ ಪ್ರದೇಶದ ಗ್ಯಾಂಗ್‌ಸ್ಟರ್‌ ಒಬ್ಬ ತನ್ನ ಮಗು ಅಸ್ವಸ್ಥನಾಗಲು ಕೊಳಗೇರಿ ಪ್ರದೇಶದ ಜನರು ವಾಮಾಚಾರ ಮಾಡಿದ್ದಾರೆ ಎಂದು ಆರೋಪಿಸಿ ನಡೆಸಿದ ಹತ್ಯಾಕಾಂಡದಲ್ಲಿ 110 ಜನ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಜಾಲ ತಿಳಿಸಿರುವುದಾಗಿ ರಾಯಿಟರ್ಸ್‌ ವರದಿ ಮಾಡಿದೆ.

ADVERTISEMENT

ಕೊಲೆಯಾದವರೆಲ್ಲರೂ 60 ವರ್ಷ ಮೇಲ್ಪಟ್ಟವರು ಎಂದು ತಿಳಿದುಬಂದಿದೆ. 

ವಾರ್ಫ್ ಜೆರೆಮಿ ಗ್ಯಾಂಗ್‌ನ ನಾಯಕ ಮೊನೆಲ್‌ ಮಿಕಾನೊ ಫೆಲಿಕ್ಸ್‌ ತನ್ನ ಮಗು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಂತೆ ಕೊಳಗೇರಿ ಪ್ರದೇಶದ ಜನ ವಾಮಾಚಾರದ ಮೂಲಕ ಮಗುವಿಗೆ ಹಾನಿ ಮಾಡಲು ಯತ್ನಿಸಿದ್ದಾರೆ ಎಂದು ಹತ್ಯಾಕಾಂಡಕ್ಕೆ ಆದೇಶಿಸಿದ್ದನು. ಗ್ಯಾಂಗ್‌ನ ಸದಸ್ಯರು ಮಚ್ಚು ಮತ್ತು ಚಾಕುವಿನಿಂದ ಇರಿದು ಶುಕ್ರವಾರ 60 ಹಾಗೂ ಶನಿವಾರ 50 ಜನರನ್ನು ಹತ್ಯೆ ಮಾಡಿದ್ದಾರೆ. ಆದರೆ ಶನಿವಾರ ಸಂಜೆ ಫೆಲಿಕ್ಸ್‌ ಮಗ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

2022ರಲ್ಲಿ ನೆರೆಯ ಡೊಮಿನಿಕನ್ ಗಣರಾಜ್ಯಕ್ಕೆ ವಾರ್ಫ್ ಜೆರೆಮಿ ಗ್ಯಾಂಗ್‌ನ ಮುಖ್ಯಸ್ಥ ಫೆಲಿಕ್ಸ್ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.