ಇಸ್ರೇಲ್-ಹಮಾಸ್ ಯುದ್ಧ
ದೀರ್ ಅಲ್–ಬಲಾಹ್: ಗಾಜಾದಲ್ಲಿ ಬಂಧಿಸಲಾಗಿದ್ದ ಅಮೆರಿಕನ್– ಇಸ್ರೇಲ್ ಒತ್ತೆಯಾಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹಮಾಸ್ ಸೋಮವಾರ ತಿಳಿಸಿದೆ. ಆದರೆ, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ.
ಟ್ರಂಪ್ ಆಡಳಿತದ ಸೂಚನೆ ಮೇರೆಗೆ ಕೊನೆಯ ಒತ್ತೆಯಾಳು ಎಡನ್ ಅಲೆಕ್ಸಾಂಡರ್ ಅವರನ್ನು ಬಿಡುಗಡೆ ಮಾಡುವುದಾಗಿ ಹಮಾಸ್ ಭಾನುವಾರವೇ ಹೇಳಿತ್ತು.
‘ಬಿಡುಗಡೆಯನ್ನು ನಿರೀಕ್ಷಿಸಿದ್ದೆವು. ಇದರ ಭಾಗವಾಗಿ ಕದನ ವಿರಾಮಕ್ಕೆ ಬದ್ಧರಾಗಿಲ್ಲ. ಆದರೆ, ಅಲೆಕ್ಸಾಂಡರ್ ಬಿಡುಗಡೆಗೆ ಅವಕಾಶ ನೀಡಲು ಸುರಕ್ಷಿತ ಕಾರಿಡಾರ್ ರಚಿಸುವುದಾಗಿ’ ಇಸ್ರೇಲ್ ಪ್ರಧಾನಿ ಕಚೇರಿ ತಿಳಿಸಿದೆ.
ಅಮೆರಿಕ ಮೂಲದ ಇಸ್ರೇಲ್ ಯೋಧನನ್ನು 2023ರ ಅ.7ರಂದು ಹಮಾಸ್ ಉಗ್ರರು ಸೆರೆ ಬಂಧಿಸಿದ್ದರು.
‘ಅಪಾಯದಲ್ಲಿ ಗಾಜಾ’
(ಟೆಲ್ ಅವೀವ್ ವರದಿ): ಔಷಧ ಹಾಗೂ ಆಹಾರ ಸರಬರಾಜಿನ ಮೇಲೆ ಹೇರಿರುವ ನಿರ್ಬಂಧವನ್ನು ಇಸ್ರೇಲ್ ಹಿಂಪಡೆದುಕೊಳ್ಳದಿದ್ದರೆ ಹಾಗೂ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸದಿದ್ದರೆ ಗಾಜಾ ಪಟ್ಟಿಯು ತೀವ್ರ ಅಪಾಯವನ್ನು ಎದುರಿಸಲಿದೆ ಎಂದು ತಜ್ಞರು ಸೋಮವಾರ ಅಭಿಪ್ರಾಯ ಪಟ್ಟಿದ್ದಾರೆ.
ಆಹಾರ, ಔಷಧ ಹಾಗೂ ಇತರ ಮೂಲಸೌಕರ್ಯಗಳು ಪ್ಯಾಲೆಸ್ಟೀನ್ ಪ್ರವೇಶಿಸದಂತೆ ಕಳೆದ 10 ವಾರಗಳಿಂದ ಇಸ್ರೇಲ್ ನಿರ್ಭಂಧಿಸಿದೆ. ಇದರ ಹೊರತಾಗಿ ತನ್ನ ದಾಳಿಯನ್ನೂ ಮುಂದುವರಿಸಿದೆ.
ಯುದ್ಧದಿಂದಾಗಿ ದೇಶದಲ್ಲಿ ಆಹಾರ ಉತ್ಪಾದಿಸುವ ಸಾಮರ್ಥ್ಯವು ಇಲ್ಲವಾಗಿರುವುದರಿಂದ ಗಾಜಾದ 23 ಲಕ್ಷ ಜನರು ಬದುಕುಳಿಯಲು ಹೊರಗಿನ ಸಹಾಯವನ್ನೇ ಅವಲಂಬಿಸಿದ್ದಾರೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.