ಕೊಲಂಬೊ: ‘ದೇಶದ ಆರ್ಥಿಕತೆಯನ್ನು ಹಳಿಗೆ ತಂದು, ಸ್ಥಿರತೆಯನ್ನು ಕಾಪಾಡಲು ಕಠಿಣವಾದ ಸುಧಾರಣಾ ಕ್ರಮಗಳು ಅಗತ್ಯವಾಗಿದ್ದವು’ ಎಂದು ಶ್ರೀಲಂಕಾದ ಕೇಂದ್ರೀಯ ಬ್ಯಾಂಕ್‌ನ ಗವರ್ನರ್ ನಂದಲಾಲ್ ವೀರಸಿಂಘೆ ಹೇಳಿದ್ದಾರೆ.
‘ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಸರ್ಕಾರ ಹಾಗೂ ಕೇಂದ್ರೀಯ ಬ್ಯಾಂಕ್ ಕಠಿಣವಾದ ನೀತಿಗಳನ್ನು ಜಾರಿಗೊಳಿಸಿದವು. ಕಳೆದ ವರ್ಷ ದೇಶದ ಸಾಮಾಜಿಕ–ಆರ್ಥಿಕ ವಲಯಗಳಲ್ಲಿ ಕಂಡುಬಂದಿದ್ದ ದುಸ್ಥಿತಿಯನ್ನು ಮೆಟ್ಟಿ ನಿಲ್ಲಲು ಈ ಕ್ರಮಗಳು ನೆರವಾದವು’ ಎಂದು ವೀರಸಿಂಘೆ ಹೇಳಿದ್ದಾರೆ.
‘ಜಾರಿಗೊಳಿಸಲಾದ ಕಠಿಣ ಕ್ರಮಗಳಿಂದ ತಕ್ಷಣಕ್ಕೆ ತೊಂದರೆ ಎನಿಸಿರಬಹುದು. ಆದರೆ, ಭವಿಷ್ಯದಲ್ಲಿ ಇದರಿಂದ ಜನರಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.