ADVERTISEMENT

ರಷ್ಯಾ–ಉಕ್ರೇನ್‌ ಬಿಕ್ಕಟ್ಟು: ಶಾಂತಿ, ಸಾಮರಸ್ಯ ಸಾರುವ ಚಿತ್ರಗಳು ವೈರಲ್‌

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2022, 8:42 IST
Last Updated 26 ಫೆಬ್ರುವರಿ 2022, 8:42 IST
ಉಕ್ರೇನ್‌ ಮತ್ತು ರಷ್ಯಾ ಧ್ವಜಗಳನ್ನು ಹೊದ್ದಿರುವ ಯುವಕ, ಯುವತಿ
ಉಕ್ರೇನ್‌ ಮತ್ತು ರಷ್ಯಾ ಧ್ವಜಗಳನ್ನು ಹೊದ್ದಿರುವ ಯುವಕ, ಯುವತಿ   

ಉಕ್ರೇನ್‌ ದೇಶದ ಮೇಲೆ ರಷ್ಯಾ ದಾಳಿ ಮಾಡಿರುವ ಬೆನ್ನಲೇ ಉಭಯ ದೇಶಗಳು ಶಾಂತಿ ಕಾಪಾಡಿಕೊಳ್ಳಬೇಕು ಎಂಬ ಪೋಸ್ಟರ್‌ಗಳು, ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಇಂತಹ ಸಾವಿರಾರು ಪೋಸ್ಟರ್‌ಗಳು, ವಿಡಿಯೊಗಳು ಇಂಟರ್ನೆಟ್‌ನಲ್ಲಿ ವೈರಲ್‌ ಆಗಿವೆ. ಇವುಗಳಲ್ಲಿ ಉಕ್ರೇನ್‌–ರಷ್ಯಾ ಧ್ವಜಗಳನ್ನು ಹೊದ್ದಿರುವ ಯುವಕ, ಯುತಿಯ ಫೋಟೊ ಹೆಚ್ಚು ಚರ್ಚಿತವಾಗುತ್ತಿದೆ.

ಉಕ್ರೇನ್‌ ಮತ್ತುರಷ್ಯಾ ಧ್ವಜಗಳನ್ನು ಹೊದ್ದಿರುವ ಯುವಕ, ಯುವತಿಯ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದು ಸಾಮರಸ್ಯದ ಪ್ರತೀಕ ಎಂದು ಎಲ್ಲ ಕಡೆ ಮೆಚ್ಚುಗೆ ವ್ಯಕ್ತವಾಗಿದೆ.

ADVERTISEMENT

ರಷ್ಯಾ ಧ್ವಜ ಹೊದ್ದಿರುವ ಯುವತಿ, ಉಕ್ರೇನ್​ ಧ್ವಜ ಹೊದ್ದುಕೊಂಡಿರುವ ಯುವಕ ತಮ್ಮ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಯುದ್ಧವನ್ನು ನಿಲ್ಲಿಸಿ ಸಾಮರಸ್ಯ ಬೆಳೆಸಿಕೊಳ್ಳಬೇಕು ಎಂಬ ಸಂದೇಶ ಸಾರಿದ್ದಾರೆ.

ಈ ಫೋಟೊ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ವಿಶ್ವದ ಲಕ್ಷಾಂತರ ಜನರು ಈ ಫೋಟೊವನ್ನು ಶೇರ್‌ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಈ ಫೋಟೊವನ್ನು ಹಂಚಿಕೊಂಡಿದ್ದಾರೆ. ಈ ಫೋಟೊ ಪ್ರೀತಿ, ಶಾಂತಿ, ಒಗ್ಗಟ್ಟಿನ ಮಂತ್ರವನ್ನು ಸಾರುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಸಾಮರಸ್ಯದ ಆಯಾಮ ಪಡೆದುಕೊಂಡಿರುವ ಈ ಫೋಟೊ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿಚರ್ಚೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.