ADVERTISEMENT

ಪಾಕ್: ನವೀಕೃತ ಮಹಾರಾಜ ಪರಮಹಂಸ ದೇವಸ್ಥಾನಕ್ಕೆ ಹಿಂದೂಗಳ ಭೇಟಿ, ಪೂಜೆ

ಭಾರತ, ಅಮೆರಿಕ ಹಾಗೂ ಕೊಲ್ಲಿ ರಾಷ್ಟ್ರಗಳಿಂದ ಬಂದಿದ್ದ ಭಕ್ತರು

ಪಿಟಿಐ
Published 2 ಜನವರಿ 2022, 11:24 IST
Last Updated 2 ಜನವರಿ 2022, 11:24 IST
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ತೆರಿ ಗ್ರಾಮದಲ್ಲಿರುವ ದೇವಸ್ಥಾನವನ್ನು ಕಳೆದ ವರ್ಷ ಡಿಸೆಂಬರ್‌ 30ರಂದು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು (ಸಂಗ್ರಹ ಚಿತ್ರ) –ಎಎಫ್‌ಪಿ ಚಿತ್ರ
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ತೆರಿ ಗ್ರಾಮದಲ್ಲಿರುವ ದೇವಸ್ಥಾನವನ್ನು ಕಳೆದ ವರ್ಷ ಡಿಸೆಂಬರ್‌ 30ರಂದು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು (ಸಂಗ್ರಹ ಚಿತ್ರ) –ಎಎಫ್‌ಪಿ ಚಿತ್ರ   

ಪೆಶಾವರ: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ತೆರಿ ಗ್ರಾಮದಲ್ಲಿರುವ ನವೀಕೃತ ಮಹಾರಾಜ ಪರಮಹಂಸ ಮಂದಿರಕ್ಕೆ ಭಾರತ, ಅಮೆರಿಕ ಹಾಗೂ ಕೊಲ್ಲಿ ರಾಷ್ಟ್ರಗಳಿಂದ ಬಂದಿದ್ದ ಹಿಂದೂಗಳು ಭಾರಿ ಭದ್ರತೆ ನಡುವೆ ಶನಿವಾರ ಭೇಟಿ ನೀಡಿ, ಪೂಜೆ ಸಲ್ಲಿಸಿದರು.

ಭಾರತದಿಂದ 200, ದುಬೈನಿಂದ 15 ಜನರು ಹಾಗೂ ಉಳಿದವರು ಅಮೆರಿಕ ಹಾಗೂ ಇತರ ಕೊಲ್ಲಿ ರಾಷ್ಟ್ರಗಳಿಂದ ಬಂದಿದ್ದರು ಎಂದು ಮೂಲಗಳು ಹೇಳಿವೆ.

ಪಾಕಿಸ್ತಾನದ ಹಿಂದೂ ಪರಿಷತ್‌ ಹಾಗೂ ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ ಜಂಟಿಯಾಗಿ, ನವೀಕೃತ ದೇವಸ್ಥಾನಕ್ಕೆ ಹಿಂದೂಗಳ ಭೇಟಿ ಕಾರ್ಯಕ್ರಮದ ವ್ಯವಸ್ಥೆ ಮಾಡಿದ್ದವು.

ADVERTISEMENT

ದೇವಸ್ಥಾನ 100 ವರ್ಷ ಹಳೆಯದಾಗಿದ್ದು, ಮಹಾರಾಜ ಪರಮಹಂಸರ ಸಮಾಧಿಯೂ ಇಲ್ಲಿದೆ. ಕಳೆದ ವರ್ಷ ಜಮಿಯತ್ ಉಲೆಮಾ ಇ–ಇಸ್ಲಾಂ ಪಕ್ಷದ ಬೆಂಬಲಿಗರು ಈ ದೇವಸ್ಥಾನವನ್ನು ಧ್ವಂಸಗೊಳಿಸಿ, ಬೆಂಕಿ ಹಚ್ಚಿದ್ದರು. ಈ ಕೃತ್ಯಕ್ಕೆ ಜಾಗತಿಕವಾಗಿ ಖಂಡನೆ ವ್ಯಕ್ತವಾಗಿತ್ತು. ಪ್ರಾಂತೀಯ ಸರ್ಕಾರವು ಈ ದೇವಸ್ಥಾನವನ್ನು ₹ 3.3 ಕೋಟಿ ವೆಚ್ಚದಲ್ಲಿ ನವೀಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.