ADVERTISEMENT

ಹಾಂಗ್‌ಕಾಂಗ್: ಮತ್ತೆ ಪ್ರತಿಭಟನೆ ಎಚ್ಚರಿಕೆ

ಬಂಧಿತರ ಬಿಡುಗಡೆ, ಪೊಲೀಸರ ದೌರ್ಜನ್ಯದ ವಿರುದ್ಧ ತನಿಖೆಗೆ ಆಗ್ರಹ

ಏಜೆನ್ಸೀಸ್
Published 20 ಜೂನ್ 2019, 20:00 IST
Last Updated 20 ಜೂನ್ 2019, 20:00 IST
ಹಾಂಗ್‌ ಕಾಂಗ್‌ನಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜನ -ಎಎಫ್‌ಪಿ ಚಿತ್ರ
ಹಾಂಗ್‌ ಕಾಂಗ್‌ನಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜನ -ಎಎಫ್‌ಪಿ ಚಿತ್ರ   

ಹಾಂಗ್‌ ಕಾಂಗ್‌: ಶಂಕಿತ ಅಪರಾಧಿಗಳನ್ನು ಚೀನಾ ಮೇನ್‌ಲ್ಯಾಂಡ್‌ಗೆ ಹಸ್ತಾಂತರಿಸುವ ಮಸೂದೆ ವಿರುದ್ಧ ಬೃಹತ್‌ ಪ್ರತಿಭಟನೆ ಯಶಸ್ವಿಯಾದ ಬೆನ್ನಲ್ಲೇ, ಮತ್ತಷ್ಟು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮತ್ತೆ ಪ್ರತಿಭಟನೆ ನಡೆಸಲು ಇಲ್ಲಿನ ವಿದ್ಯಾರ್ಥಿ ಸಂಘಟನೆಗಳು ಸಜ್ಜಾಗಿವೆ.

ಮಸೂದೆ ವಿರೋಧಿಸಿ ಲಕ್ಷಾಂತರ ಜನರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ತಕ್ಷಣದಲ್ಲೇ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ಯಾರಿ ಲ್ಯಾಮ್‌ ಕ್ಷಮೆಯಾಚಿಸಿ, ಮಸೂದೆಯನ್ನು ರದ್ದುಗೊಳಿಸಿದ್ದರು. ಆದರೆ ತಮ್ಮ ಸ್ಥಾನದಿಂದ ಇಳಿಯಲು ನಿರಾಕರಿಸಿದ್ದರು. ಈಗ ಪ್ರತಿಭಟನಾಕಾರರುಲ್ಯಾಮ್‌ ಪದಚ್ಯುತಿ ಆಗ್ರಹಿಸಿದ್ದಾರೆ.

ಸಂಘರ್ಷದ ಸಂದರ್ಭದಲ್ಲಿ ಬಂಧಿತರಾಗಿದ್ದವರ ಬಿಡುಗಡೆ, ಪೊಲೀಸರು ನಡೆಸಿದ ದೌರ್ಜನ್ಯದ ಬಗ್ಗೆ ತನಿಖೆ ನಡೆಯಬೇಕು ಎಂದು ಹೊಸ ಬೇಡಿಕೆಗಳನ್ನು ಇರಿಸಿಕೊಂಡು ಸಂಘಟನೆಗಳು ಬೃಹತ್ ಪ್ರತಿಭಟನೆಗೆ ಸಜ್ಜಾಗಿವೆ. ಲ್ಯಾಮ್‌ ಮನೆಗೂ ಮುತ್ತಿಗೆ ಹಾಕುವ ಕುರಿತು ಸಂದೇಶಗಳು ಹರಡುತ್ತಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.