ಬೀಜಿಂಗ್: ಕೋವಿಡ್–19 ಸೋಂಕಿತರನ್ನು ಇರಿಸಲಾಗಿದ್ದ ಕ್ವನ್ಜೊವು ನಗರದ ಹೋಟೆಲ್ ಕಟ್ಟಡವೊಂದು ಶನಿವಾರ ರಾತ್ರಿ ಕುಸಿದಿದ್ದು, 70ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ.
ಎರಡು ವರ್ಷಗಳ ಹಿಂದೆಯಷ್ಟೇ ಕಾರ್ಯಾರಂಭಮಾಡಿದ್ದ ಈ ಹೋಟೆಲ್‌ನಲ್ಲಿ ಕೋವಿಡ್–19 ಸೋಂಕಿತರನ್ನು ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. 80 ಕೊಠಡಿಗಳಿದ್ದ ಈ ಹೋಟೆಲ್‌ನ ಅವಶೇಷಗಳಿಂದ 38 ಮಂದಿಯನ್ನು ರಕ್ಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.