ADVERTISEMENT

ಹುಥಿ ಬಂಡುಕೋರರಿಂದ ವಿಶ್ವಸಂಸ್ಥೆಯ 9 ಮಂದಿ ನೆರೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 14:49 IST
Last Updated 7 ಅಕ್ಟೋಬರ್ 2025, 14:49 IST
.
.   

ಕೈರೊ: ಯೆಮೆನ್‌ನಲ್ಲಿ ಇರಾನ್‌ ಬೆಂಬಲಿತ ಹುಥಿ ಬಂಡುಕೋರರು ವಿಶ್ವಸಂಸ್ಥೆಯ ಒಂಬತ್ತು ಉದ್ಯೋಗಿಗಳನ್ನು ಸೆರೆಹಿಡಿದು ಇಟ್ಟುಕೊಂಡಿದ್ದಾರೆ.

ಹುಥಿ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶದಲ್ಲಿ 2021ರಿಂದ ಈವರೆಗೆ ವಿಶ್ವಸಂಸ್ಥೆಯ 53 ಕಾರ್ಯಕರ್ತರನ್ನು ಸೆರೆಹಿಡಿದು ಇಟ್ಟುಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ವಕ್ತಾರ ಸ್ಟೀಫನ್‌ ಡುಜಾರಿಕ್‌ ಸೋಮವಾರ ಹೇಳಿದ್ದಾರೆ. ಆದರೆ, ಇತ್ತೀಚಿನ ಸೆರೆಯ ಸಮಯ ಮತ್ತು ಸ್ಥಳದ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿಲ್ಲ.

‘ಯೆಮೆನ್‌ನಲ್ಲಿ ಕಾರ್ಯನಿರ್ವಹಿಸಲು ಹಾಗೂ ಅಗತ್ಯ ನೆರವು ನೀಡಲು ಇದು ಅಡ್ಡಿಯಾಗಿದೆ. ವಿಶ್ವಸಂಸ್ಥೆ ಸೇರಿದಂತೆ ಅಂತರರಾಷ್ಟ್ರೀಯ ಸಂಘಟನೆಗಳ ಕಾರ್ಯಕರ್ತರನ್ನು ಕೂಡಲೇ ಬೇಷರತ್ತಾಗಿ ಬಿಡುಗಡೆ ಮಾಡಬೇಕು. ಅಂತರರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಅವರನ್ನು ಗೌರವಿಸಬೇಕು ಹಾಗೂ ರಕ್ಷಿಸಬೇಕು’ ಎಂದು ಸ್ಟೀಫನ್‌ ಆಗ್ರಹಿಸಿದ್ದಾರೆ.

ADVERTISEMENT