ADVERTISEMENT

ಪ್ರಧಾನಿ ಕಾರ್ಯಕ್ರಮಕ್ಕೆ ‘ಹೌಡಿ ಮೋದಿ’ ಹೆಸರೇಕೆ ಬಂತು, ಅರ್ಥವೇನು?

ಏಜೆನ್ಸೀಸ್
Published 22 ಸೆಪ್ಟೆಂಬರ್ 2019, 11:49 IST
Last Updated 22 ಸೆಪ್ಟೆಂಬರ್ 2019, 11:49 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಹ್ಯೂಸ್ಟನ್:ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಭಾಗವಹಿಸಲಿರುವ ಬಹುನಿರೀಕ್ಷಿತ ‘ಹೌಡಿ ಮೋದಿ’ ಕಾರ್ಯಕ್ರಮ ಭಾರತೀಯ ಕಾಲಮಾನ ಪ್ರಕಾರ ಇಂದು ರಾತ್ರಿ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ‘ಹೌಡಿ ಮೋದಿ’ ಎಂಬ ಹೆಸರಿಟ್ಟಿರುವುದು ಯಾಕೆ? ‘ಹೌಡಿ’ ಎಂದರೇನು ಎಂಬ ಕುತೂಹಲ ಸಹಜವಾಗಿಯೇ ಜನರಲ್ಲಿ ಮೂಡಿದೆ.

‘ಹೌಡಿ’ ಎಂದರೆ ಅನೌಪಚಾರಿಕವಾಗಿ ಶುಭಾಶಯ ವಿನಿಮಯ ಮಾಡಿಕೊಳ್ಳುವ ಒಂದು ಪದ. ‘ಹೌ ಡು ಯು ಡು ಅಥವಾ ಹೇಗಿದ್ದೀರಿ’ ಎಂಬ ಪದದ ಸಂಕ್ಷಿಪ್ತ ರೂಪವಾಗಿ ಬಳಕೆಯಲ್ಲಿದೆ. ಅಮೆರಿಕದ ಮಕ್ಸಿಕೊ, ನೆವಾಡ, ಒರೆಗಾನ್ ಮತ್ತು ಟೆಕ್ಸಾಸ್‌ನಲ್ಲಿ ಈ ಪದ ಆಡುಭಾಷೆಯಾಗಿ ಬಳಕೆಯಲ್ಲಿದೆ. ಇದೇ ಪದವನ್ನು ಮೋದಿ ಅವರ ಕಾರ್ಯಕ್ರಮಕ್ಕೂ ಇಡಲಾಗಿದೆ.

ಹ್ಯೂಸ್ಟನ್‌ನ ಎನ್‌ಆರ್‌ಜಿ ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 50 ಸಾವಿರ ಭಾರತೀಯ ಅಮೆರಿಕನ್ನರು ಭಾಗವಹಿಸುವ ನಿರೀಕ್ಷೆಯಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.