ADVERTISEMENT

ಸಿಎಎ ವಿರುದ್ಧ ಅಮೆರಿಕದಲ್ಲಿ ರ‍್ಯಾಲಿ ಇಂದು

ಪಿಟಿಐ
Published 25 ಜನವರಿ 2020, 19:41 IST
Last Updated 25 ಜನವರಿ 2020, 19:41 IST
   

ವಾಷಿಂಗ್ಟನ್‌: ಭಾರತದಲ್ಲಿ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ಅಮೆರಿಕದ ವಿವಿಧ ಮಾನವ ಹಾಗೂ ನಾಗರಿಕ ಹಕ್ಕುಗಳ ಸಂಘಟನೆಗಳು ಜನವರಿ 26ರಂದು ರ್‍ಯಾಲಿ ಹಮ್ಮಿಕೊಳ್ಳಲಿವೆ.

ವಾಷಿಂಗ್ಟನ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯಿಂದ ಶ್ವೇತಭವನ ತನಕ ಈ ಸಂಘಟನೆಗಳು ರ‍್ಯಾಲಿ ಹಮ್ಮಿಕೊಳ್ಳಲಿವೆ. ಜತೆಗೆ, ಭಾರತದ ಕಾನ್ಸಲೇಟ್‌ ಕಚೇರಿಗಳಿರುವ ನ್ಯೂಯಾರ್ಕ್‌, ಸ್ಯಾನ್‌ಫ್ರಾನ್ಸಿಸ್ಕೊ, ಷಿಕಾಗೊ, ಅಟ್ಲಾಂಟಾ ಹಾಗೂ ಹ್ಯೂಸ್ಟನ್‌ನಲ್ಲೂ ರ‍್ಯಾಲಿಗಳು ನಡೆಯಲಿವೆ.

ಭಾರತದಲ್ಲಿ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕು ಹಾಗೂ ರಾಷ್ಟ್ರೀಯ ಜನಸಂಖ್ಯೆ ನೋಂದಣಿ (ಎನ್‌ಪಿಆರ್), ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‌ಆರ್‌ಸಿ) ಕೈಬಿಡಬೇಕು ಎಂದು ಈ ಸಂಘಟನೆಗಳು ಒತ್ತಾಯಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.