ADVERTISEMENT

ಇರಾನ್‌: ಸುಳ್ಳು ಸುದ್ದಿ ನಂಬಿ ಮೆಥನಾಲ್ ಕುಡಿದು ನೂರಕ್ಕಿಂತಲೂ ಹೆಚ್ಚು ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 16:43 IST
Last Updated 27 ಮಾರ್ಚ್ 2020, 16:43 IST
ತೆಹರಾನ್‌ನಲ್ಲಿ ತಪಾಸಣೆ
ತೆಹರಾನ್‌ನಲ್ಲಿ ತಪಾಸಣೆ   

ತೆಹರಾನ್: ಮೆಥನಾಲ್‌ ಕುಡಿದರೆ ಕೊರೊನಾ ವೈರಸ್‌ನಿಂದ ಗುಣಮುಖರಾಗಬಹುದು ಎಂಬ ಸುಳ್ಳು ಸುದ್ದಿ ನಂಬಿ, ಇರಾನ್‌ನಲ್ಲಿ ನೂರಕ್ಕಿಂತಲೂ ಹೆಚ್ಚು ಮಂದಿ ಇದನ್ನುಕುಡಿದು ಪ್ರಾಣ ಕಳೆದುಕೊಂಡಿದ್ದಾರೆ.ಇಸ್ಲಾಮಿಕ್ ರಿಪಬ್ಲಿಕ್‌‌ ಆಫ್ ಇರಾನ್‌ನಲ್ಲಿ 300ರಷ್ಟುಮಂದಿ ಸಾವಿಗೀಡಾಗಿದ್ದಾರೆ ಮತ್ತು 1,000ಕ್ಕಿಂತಲೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ ಎಂದು ಇರಾನಿನ ಮಾಧ್ಯಮಗಳು ವರದಿ ಮಾಡಿವೆ.

ವೈರಸ್ ಹರಡುವಿಕೆಯಿಂದ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ.ಅದರ ಜತೆಗೆ ಸುತ್ತಮುತ್ತ ಮತ್ತಷ್ಚು ಅಪಾಯಗಳಿವೆ ಎಂಬುದು ಅವರಿಗೆ ಗೊತ್ತಿಲ್ಲ ಎಂದು ಓಸ್ಲೋದಲ್ಲಿರುವ ಟಾಕ್ಸಿಕಾಲಜಿಸ್ಟ್ ಡಾ.ಕುಟ್ ಎರಿಕ್ ಹೊವಡಾ ಹೇಳಿದ್ದಾರೆ.ಅವರು ಈ ರೀತಿ ಕುಡಿಯುತ್ತಾ ಇದ್ದರೆ, ಹೆಚ್ಚು ಜನರಿಗೆ ವಿಷಪ್ರಾಶನವಾಗುತ್ತದೆ ಎಂದಿದ್ದಾರೆ ಎರಿಕ್.

ಹೊಸ ಕೊರೊನಾ ವೈರಸ್‌ ಸೋಂಕಿನಿಂದ ಕೆಮ್ಮು ಮತ್ತು ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಎರಡು ಮೂರುವಾರದಲ್ಲಿ ಇದು ಸರಿಹೋಗುತ್ತದೆ.ರೋಗ ಉಲ್ಬಣವಾದರೆ ಮಾತ್ರ ಸಾವು ಸಂಭವಿಸುತ್ತದೆ.

ADVERTISEMENT

ತೆಹರಾನ್‌ನಿಂದ ಅಲ್‌ಬಾಜ್ ಹೈವೇ ಹೋಗುವ ದಾರಿಗೆ ತಡೆಯೊಡ್ಡಿರುವ ಪೊಲೀಸರು ಅಲ್ಲಿಯೇ ರೋಗ ತಪಾಸಣೆ ಮಾಡುತ್ತಿದ್ದಾರೆ.

ಇಲ್ಲಿಯವರೆಗೆ ಕೋವಿಡ್ 19ಗೆ ಯಾವುದೇ ಔಷಧಿ ಕಂಡುಹಿಡಿದಿಲ್ಲ. ಆದರೆ ಇರಾನಿನ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಲೇ ಇದೇ. ವಿಸ್ಕಿ ಮತ್ತು ಜೇನು ತುಪ್ಪದಿಂದ ರೋಗ ಗುಣವಾಗುತ್ತದೆ ಎಂಬ ಸುಳ್ಳು ಸುದ್ದಿಯೂ ಹರಿದಾಡಿದೆ.

ಅದೇ ವೇಳೆ ವೈರಸ್‌ನಿಂದ ದೂರವಿರಲು ಮದ್ಯದ ಅಂಶವಿರುವ ಹ್ಯಾಂಡ್‌ಸ್ಯಾನಿಟೈಜರ್ ಬಳಸುವುದಾದರೆ ಮದ್ಯದ ಅಂಶ ಜಾಸ್ತಿ ಇರುವುದನ್ನು ಕುಡಿದರೆ ದೇಹದಲ್ಲಿರುವ ವೈರಸ್ ಸಾಯುತ್ತದೆ ಎಂಬ ಲೆಕ್ಕಾಚಾರದಿಂದ ಈ ಅನಾಹುತ ಸಂಭವಿಸಿದೆ.

ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನಲ್ಲಿ ಈವರೆಗೆ 29,000 ಮಂದಿಗೆ ಕೊವಿಡ್ ರೋಗ ದೃಢಪಟ್ಟಿದ್ದು.2,200 ಜನರು ಸಾವಿಗೀಡಾಗಿದ್ದಾರೆ.ಮಧ್ಯಪ್ರಾಚ್ಯದ ಇತರ ರಾಷ್ಟ್ರಗಳ ಪೈಕಿ ಇರಾನ್‌ನಲ್ಲಿ ಅತೀ ಹೆಚ್ಚು ಸಾವು ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.