ADVERTISEMENT

ರಾಜೀನಾಮೆಯೂ ಸೇರಿದಂತೆ 3 ಆಯ್ಕೆಗಳನ್ನು ನನ್ನ ಮುಂದಿಡಲಾಗಿತ್ತು: ಇಮ್ರಾನ್‌

ಪಿಟಿಐ
Published 18 ಏಪ್ರಿಲ್ 2022, 16:24 IST
Last Updated 18 ಏಪ್ರಿಲ್ 2022, 16:24 IST
ಇಮ್ರಾನ್ ಖಾನ್, ಪಾಕಿಸ್ತಾನ ಮಾಜಿ ಪ್ರಧಾನಿ
ಇಮ್ರಾನ್ ಖಾನ್, ಪಾಕಿಸ್ತಾನ ಮಾಜಿ ಪ್ರಧಾನಿ   

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಇತ್ತೀಚೆಗೆ ಉದ್ಭವಿಸಿದ್ದ ರಾಜಕೀಯ ಪ್ರಕ್ಷುಬ್ಧ ಸ್ಥಿತಿ ವೇಳೆ ದೇಶದ ಪ್ರಬಲ ಸ್ಥಾಪಿತ ವರ್ಗವು ತಮಗೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವುದು, ಅವಧಿಪೂರ್ವ ಚುನಾವಣೆ ಘೋಷಿಸುವುದು ಮತ್ತು ಅವಿಶ್ವಾಸ ನಿರ್ಣಯವನ್ನು ಎದುರಿಸುವ 3 ಆಯ್ಕೆಗಳನ್ನು ನೀಡಿತ್ತು ಎಂದು ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಅವರು ಹೇಳಿದ್ದಾರೆ.

ಇಲ್ಲಿ ಪತ್ರಕರ್ತರ ಜೊತೆ ನಡೆಸಿದ ಅನೌಪಚಾರಿಕ ಮಾತುಕತೆ ವೇಳೆ ಇಮ್ರಾನ್ ಖಾನ್ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.ಪ್ರಬಲ ಸ್ಥಾಪಿತ ವರ್ಗವು ತಮಗೆ ಮೂರು ಆಯ್ಕೆಗಳನ್ನು ನೀಡಿತ್ತು. ಅದರಲ್ಲಿ ನಾನು ಅವಧಿಪೂರ್ವ ಚುನಾವಣೆಗೆ ಹೋಗುವ ಪ್ರಸ್ತಾವನೆಗೆ ಒಪ್ಪಿಕೊಂಡಿದ್ದೆ. ಆದರೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಮತ್ತು ಅವಿಶ್ವಾಸ ಮತ ಎದುರಿಸುವುದನ್ನು ಒಪ್ಪಿಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ದೇಶಕ್ಕೆ ಪ್ರಬಲ ಮತ್ತು ಸಂಘಟಿತ ಸೇನೆಯ ಅಗತ್ಯವಿದೆ. ಇದೇ ಕಾರಣಕ್ಕೆ ನಾನು ಏನನ್ನೂ ಮಾತನಾಡುತ್ತಿಲ್ಲ. ನಮ್ಮದು ಮುಸ್ಲಿಂ ದೇಶ ಮತ್ತು ಪ್ರಬಲ ಸೇನೆಯು ನಮ್ಮ ಭದ್ರತೆಯ ಖಾತ್ರಿಯಾಗಿದೆ ಎಂದು ತಿಳಿಸಿದರು.

ADVERTISEMENT

ಪಾಕಿಸ್ತಾನದ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜಕೀಯ ಬಿಕ್ಕಟ್ಟು ಶಮನಕ್ಕೆ ಪ್ರಧಾನಿ ಕಾರ್ಯಾಲಯವು ಸೇನಾ ಮುಖ್ಯಸ್ಥರ ನೆರವು ಬಯಸಿತ್ತು ಎಂದು ಸೇನಾ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತಿಖಾರ್ ಅವರು ಹೇಳಿದ ಬೆನ್ನಲ್ಲೇ, ಖಾನ್ ಅವರ ಈ ಹೇಳಿಕೆ ಹೊರಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.