
ಇಸ್ಲಾಮಾಬಾದ್/ಲಾಹೋರ್ : ‘ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ದೈಹಿಕ ಆರೋಗ್ಯ ಚೆನ್ನಾಗಿದೆ. ಆದರೆ ಅವರನ್ನು ಒಂಟಿಯಾಗಿ ಸೆರೆಯಲ್ಲಿಡುವ ಮೂಲಕ ಮಾನಸಿಕ ಚಿತ್ರಹಿಂಸೆಗೆ ಒಳಪಡಿಸಲಾಗುತ್ತಿದೆ’ ಎಂದು ಅವರ ಸಹೋದರಿ ಡಾ. ಉಜ್ಮಾ ಖಾನ್ ಅವರು ಮಂಗಳವಾರ ತಿಳಿಸಿದ್ದಾರೆ.
ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಇಮ್ರಾನ್ ಖಾನ್ ಅವರನ್ನು ಉಜ್ಮಾ ಖಾನ್ ಭೇಟಿಯಾದ ನಂತರ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಪಕ್ಷವು ಪ್ರಕಟಣೆ ಮೂಲಕ ಈ ವಿಷಯವನ್ನು ತಿಳಿಸಿದೆ.
ಜೈಲಿನಲ್ಲಿರುವ ಮಾಜಿ ಪ್ರಧಾನಿಯನ್ನು ಭೇಟಿಯಾಗಲು ಅವರ ಕುಟುಂಬಸ್ಥರಿಗೆ ಒಂದು ತಿಂಗಳಿನಿಂದ ಅವಕಾಶ ಕೊಡದಿದ್ದರಿಂದ, ಸಾಮಾಜಿಕ ಮಾಧ್ಯಮದಲ್ಲಿ ವಿಭಿನ್ನ ಸ್ವರೂಪದ ಸುದ್ದಿಗಳು ಬಿತ್ತರಗೊಂಡಿದ್ದವು.
‘ಇಮ್ರಾನ್ ಖಾನ್ ಅವರನ್ನು ಭೇಟಿಯಾದಾಗ ಕೋಪದಲ್ಲಿದ್ದರು. ಬಹುತೇಕ ಅವಧಿ ನನ್ನನ್ನು ಒಂಟಿಯಾಗಿ ಸೆರೆಯಲ್ಲಿಡುವ ಮೂಲಕ ಮಾನಸಿಕ ಚಿತ್ರಹಿಂಸೆಗೆ ಒಳಪಡಿಸುತ್ತಿದ್ದಾರೆ. ಯಾರೊಂದಿಗೂ ಸಂವಹನ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ದೂರಿದರು’ ಎಂದು ಉಜ್ಮಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.