ADVERTISEMENT

ಪಾಕಿಸ್ತಾನ | ಇಮ್ರಾನ್‌ ಖಾನ್‌ ಸಹೋದರಿ ಮೇಲೆ ಮೊಟ್ಟೆ ಎಸೆತ: ಇಬ್ಬರ ಬಂಧನ

ಏಜೆನ್ಸೀಸ್
Published 6 ಸೆಪ್ಟೆಂಬರ್ 2025, 3:15 IST
Last Updated 6 ಸೆಪ್ಟೆಂಬರ್ 2025, 3:15 IST
<div class="paragraphs"><p>ಅಲೀಮಾ ಖಾನ್‌</p></div>

ಅಲೀಮಾ ಖಾನ್‌

   

ರಾವಲ್ಪಿಂಡಿ: ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್‌ ಖಾನ್‌ ಅವರ ಸಹೋದರಿ ಅಲೀಮಾ ಖಾನ್‌ ಅವರ ಮೇಲೆ ಮೊಟ್ಟೆ ಎಸೆದ ಘಟನೆ ನಡೆದಿದೆ.

ತೋಷಖಾನಾ ಪ್ರಕರಣದ ವಿಚಾರಣೆ ಮುಗಿದ ನಂತರ ಅವರು ಅದಿಯಾಲ ಜೈಲಿನ ಮುಂಭಾಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡುವಾಗ ಈ ಘಟನೆ ನಡೆದಿದೆ.

ADVERTISEMENT

ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಘಿ ಹರಿದಾಡುತ್ತಿದೆ. 

ಮೊಟ್ಟೆ, ಅಲೀಮಾ ಅವರ ಗಲ್ಲಕ್ಕೆ ಬಡಿದು ನಂತರ ಬಟ್ಟೆಯ ಮೇಲೆ ಬೀಳುವುದನ್ನು ವಿಡಿಯೊದಲ್ಲಿ ಕಾಣಬಹುದು. ಮೊಟ್ಟೆ ದಾಳಿಯಿಂದ ಬೆಚ್ಚಿಬಿದ್ದ ಅಲೀಮಾ ಅವರು ಶಾಂತವಾಗಿ ಪ್ರತಿಕ್ರಿಯಿಸಿ, ಪರವಾಗಿಲ್ಲ ಬಿಡಿ ಎಂದು ಹೇಳುತ್ತಾರೆ. 

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ. ಇವರು ಪಿಟಿಐ ಪಕ್ಷದ ಬೆಂಬಲಿಗರು ಎಂದು ತಿಳಿದುಬಂದಿದೆ. 

ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರ ನೀಡದೆ ತಪ್ಪಿಸಿಕೊಂಡ ನಂತರ ಅಲೀಮಾ ಅವರ ಮೇಲೆ ಮೊಟ್ಟೆ ಎಸೆಯಲಾಗಿದೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.