ADVERTISEMENT

₹6 ಕೋಟಿಯ ಬಾಂಬ್ ನಿರೋಧಕ ಸರ್ಕಾರಿ ಕಾರನ್ನು ತಮ್ಮೊಂದಿಗೇ ಕೊಂಡೊಯ್ದ ಖಾನ್: ಆರೋಪ

ಪಿಟಿಐ
Published 2 ಮೇ 2022, 14:02 IST
Last Updated 2 ಮೇ 2022, 14:02 IST
ಇಮ್ರಾನ್‌ ಖಾನ್‌
ಇಮ್ರಾನ್‌ ಖಾನ್‌    

ಇಸ್ಲಾಮಾಬಾದ್‌: ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಸುಮಾರು ₹ 6.17 ಕೋಟಿ ಮೌಲ್ಯದ ಸರ್ಕಾರಿ ವಾಹನವನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ ಎಂದು ಪಾಕಿಸ್ತಾನದ ವಾರ್ತಾ ಸಚಿವೆ ಮರಿಯಮ್ ಔರಂಗಜೇಬ್ ಸೋಮವಾರ ಹೇಳಿದ್ದಾರೆ.

ವಿದೇಶಿ ನಿಯೋಗಗಳು ಪಾಕಿಸ್ತಾನಕ್ಕೆ ಬಂದಾಗ ಬಳಸಲಾಗುವ, ಪ್ರಧಾನಿ ಕಚೇರಿಯ ಕಾರು, ಬಿಎಂಡಬ್ಲ್ಯುಎಕ್ಸ್‌5 ಅನ್ನು ಖಾನ್ ಅವರು ಪ್ರಧಾನಿ ಕಚೇರಿಯಿಂದ ಹೊರ ನಡೆಯುವಾಗ ತಮ್ಮೊಂದಿಗೆ ಕೊಂಡೊಯ್ದಿದ್ದಾರೆ ಎಂದು ಅವರು ಹೇಳಿದರು.

ದುಬಾರಿ ಕಾರುಗಳ ಬಳಕೆಗಾಗಿ ಅವರ ಸರ್ಕಾರವನ್ನು ಟೀಕಿಸಲಾಗುತ್ತಿತ್ತು. ಆದರೂ,ಅವರು ಕಾರನ್ನು ತಮ್ಮ ಬಳಿಯೇಉಳಿಸಿಕೊಂಡಿದ್ದಾರೆ ಎಂದು ಔರಂಗಜೇಬ್ ಹೇಳಿದರು.

ADVERTISEMENT

ಆರು ವರ್ಷಗಳ ಹಿಂದೆ ಸುಮಾರು ಖರೀದಿಸಲಾಗಿದ್ದ ಕಾರು, ಬಾಂಬ್ ಮತ್ತು ಗುಂಡು ನಿರೋಧಕ ವ್ಯವಸ್ಥೆ ಹೊಂದಿತ್ತು ಎಂದು ಸರ್ಕಾರ ಹೇಳಿದೆ.

ಬೇರೆ ದೇಶದ ರಾಜತಾಂತ್ರಿಕರು ಉಡುಗೊರೆಯಾಗಿ ನೀಡಿದ್ದ ಬಂದೂಕನ್ನೂ ಇಮ್ರಾನ್‌ ಖಾನ್‌ ಸರ್ಕಾರಕ್ಕೆ ಒಪ್ಪಿಸುವ ಬದಲಿಗೆ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ ಎಂದು ಸಚಿವೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.