ADVERTISEMENT

ಸದ್ಯ ಇಮ್ರಾನ್ ಖಾನ್ ಅವರೇ ಪ್ರಧಾನಿಯಾಗಿರುತ್ತಾರೆ: ಪಾಕ್ ಅಧ್ಯಕ್ಷ ಅಲ್ವಿ

ಪಿಟಿಐ
Published 4 ಏಪ್ರಿಲ್ 2022, 7:51 IST
Last Updated 4 ಏಪ್ರಿಲ್ 2022, 7:51 IST
   

ಇಸ್ಲಾಮಾಬಾದ್: ಮೈತ್ರಿಪಕ್ಷಗಳ ಅವಕೃಪೆಗೆ ಪಾತ್ರವಾಗಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ದಾರಿ ಕಾಣದೇ ಸಂಸತ್ತನ್ನು ವಿಸರ್ಜಿಸಿದ್ದಾರೆ.

ಇದರ ಬೆನ್ನಲ್ಲೇ ಪಾಕಿಸ್ತಾನದ ಅಧ್ಯಕ್ಷ ಆರೀಪ್ ಅಲ್ವಿ ಅವರು ಹೊಸ ಸುತ್ತೋಲೆ ಹೊರಡಿಸಿದ್ದು, ಹಂಗಾಮಿ ಪ್ರಧಾನಿ ಹೆಸರನ್ನು ಘೋಷಿಸುವವರೆಗೂ ಇಮ್ರಾನ್ ಖಾನ್ ಅವರೇ ಪ್ರಧಾನಿಯಾಗಿರುತ್ತಾರೆ ಎಂದು ಹೇಳಿದ್ದಾರೆ.

ತಕ್ಷಣದಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದುಆರೀಪ್ ಅಲ್ವಿ ಹೇಳಿದ್ದಾರೆ.ಪಾಕಿಸ್ತಾನದ ಸಂವಿಧಾನದ 94 ನೇ ವಿಧಿಯಲ್ಲಿ ಈ ಅವಕಾಶವಿದ್ದು, ಅಧ್ಯಕ್ಷರು ಹಂಗಾಮಿ ಪ್ರಧಾನಿ ನೇಮಿಸುವವರೆಗೂ ನಿಕಟಪೂರ್ವ ಪ್ರಧಾನಿಯೇ ಪ್ರಧಾನ ಮಂತ್ರಿಯಾಗಿರುತ್ತಾರೆ.

ADVERTISEMENT

ಮೈತ್ರಿಕೂಟದ ಕೆಲ ಪಕ್ಷಗಳು ಖಾನ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ಆದರೆ ಇದಕ್ಕೆ ಉಪ ಸಭಾಪತಿ ಖಾಸಿಮ್ ಸೂರಿ ಸೊಪ್ಪು ಹಾಕಿರಲಿಲ್ಲ. ಇದರಿಂದ ಸಂಸತ್ತನ್ನು ವಿಸರ್ಜಿಸುವಂತೆ ಅಧ್ಯಕ್ಷರಿಗೆ ಇಮ್ರಾನ್ ಖಾನ್ ಸಲಹೆ ನೀಡಿದ್ದರು.

ಪಾಕಿಸ್ತಾನದ ಇಂದಿನ ರಾಜಕೀಯ ಘಟನೆಗಳಿಗೆ ಅಮೆರಿಕ ಹಾಗೂ ಕೆಲ ಪಾಶ್ಚಿಮಾತ್ಯ ದೇಶಗಳ ಕೈವಾಡ ಇದೆ ಎಂದು ಇಮ್ರಾನ್ ಖಾನ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.