
ಪಿಟಿಐ
ಕೊಲಂಬೊ: ದಿತ್ವಾ ಚಂಡಮಾರುತದಿಂದ ತತ್ತರಿಸಿರುವ ಶ್ರೀಲಂಕಾದ ಮರು ನಿರ್ಮಾಣಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಭಾರತವು ಮಂಗಳವಾರ ₹4.28 ಸಾವಿರ ಕೋಟಿ (450 ಮಿಲಿಯನ್ ಡಾಲರ್) ಪ್ಯಾಕೇಜ್ ಘೋಷಿಸಿದೆ.
ಎರಡು ದಿನಗಳ ಶ್ರೀಲಂಕಾ ಪ್ರವಾಸ ಕೈಗೊಂಡಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್, ಪ್ರಧಾನಿ ಹರಿಣಿ ಅಮರಸೂರ್ಯ ಅವರನ್ನು ಭೇಟಿ ಮಾಡಿದ ವೇಳೆ ಈ ಕುರಿತು ಘೋಷಿಸಿದ್ದಾರೆ. ನಂತರ ಅವರು, ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ಅವರೊಂದಿಗೆ ಮಾತುಕತೆ ನಡೆಸಿದರು.
ಉದ್ಘಾಟನೆ: ಕಿಲಿನೊಚ್ಚಿ ಜಿಲ್ಲೆಯ ಬೈಲೆ ಸೇತುವೆಯನ್ನು ಜೈಶಂಕರ್ ಉದ್ಘಾಟಿಸಿದ್ದಾರೆ.