ADVERTISEMENT

ಚೀನಾವನ್ನು ಹಿಂದಿಕ್ಕಿ ವಿಶ್ವಸಂಸ್ಥೆಯ ಮಂಡಳಿಗೆ ಆಯ್ಕೆಯಾದ ಭಾರತ

ಏಜೆನ್ಸೀಸ್
Published 15 ಸೆಪ್ಟೆಂಬರ್ 2020, 1:40 IST
Last Updated 15 ಸೆಪ್ಟೆಂಬರ್ 2020, 1:40 IST
ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್‌. ತಿರುಮೂರ್ತಿ
ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್‌. ತಿರುಮೂರ್ತಿ   

ವಾಷಿಂಗ್ಟನ್:ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯಾದ ‘ಮಹಿಳೆಯರ ಸ್ಥಿತಿಗತಿ ಆಯೋಗ’ದ ಸದಸ್ಯ ರಾಷ್ಟ್ರವಾಗಿ ಭಾರತ ಆಯ್ಕೆಯಾಗಿದೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್‌. ತಿರುಮೂರ್ತಿ ಅವರು ತಿಳಿಸಿದ್ದಾರೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿರುವ ತಿರುಮೂರ್ತಿ, ‘ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯಲ್ಲಿ ಪ್ರತಿಷ್ಠಿತ ಸ್ಥಾನವನ್ನು ಭಾರತ ಗೆದ್ದಿದೆ. ಮಹಿಳೆಯರ ಸ್ಥಿತಿಗತಿ ಆಯೋಗದ ಸದಸ್ಯ ರಾಷ್ಟ್ರವಾಗಿ ಭಾರತವು ಆಯ್ಕೆಯಾಗಿದೆ. ಇದು ನಮ್ಮ ಪ್ರತಿ ಪ್ರಯತ್ನಗಳಲ್ಲಿ ಲಿಂಗ ಸಮಾನತೆ ಮತ್ತು ಮಹಿಳೆಯರ ಸಬಲೀಕರಣವನ್ನು ಉತ್ತೇಜಿಸುವ ಬದ್ಧತೆಯನ್ನು ಬಿಂಬಿಸುವ ಅನುಮೊದನೆಯಾಗಿದೆ. ಎಲ್ಲ ಸದಸ್ಯ ರಾಷ್ಟ್ರಗಳ ಬೆಂಬಲಕ್ಕಾಗಿ ನಾವು ಧನ್ಯವಾದ ತಿಳಿಸುತ್ತೇವೆ’ ಎಂದು ಬರೆದುಕೊಂಡಿದ್ದಾರೆ.

ಆಯೋಗದ ಸದಸ್ಯತ್ವಕ್ಕಾಗಿಭಾರತ, ಅಫ್ಗಾನಿಸ್ತಾನ ಮತ್ತು ಚೀನಾ ರಾಷ್ಟ್ರಗಳು ಸ್ಪರ್ಧಿಸಿದ್ದವು. 54 ಸದಸ್ಯ ರಾಷ್ಟ್ರಗಳು ಮತ ಚಲಾಯಿಸಿದ್ದವು. ಅಫ್ಗಾನಿಸ್ತಾನ 39, ಭಾರತ 38 ಮತ ಗಳಿಸಿದರೆ, ಚೀನಾಗೆ 27 ಸದಸ್ಯರ ಮತ ಲಭ್ಯವಾಗಿದೆ.

ADVERTISEMENT

ಭಾರತವು ಮುಂದಿನ 4 ವರ್ಷಗಳ ಅವಧಿಗೆ (2021–2025) ವಿಶ್ವಸಂಸ್ಥೆಯ ಆಯೋಗದ ಸದಸ್ಯ ರಾಷ್ಟ್ರವಾಗಿ ಮುಂದುವರಿಯಲಿದೆ.

ಈ ವರ್ಷ ಪ್ರಸಿದ್ಧ ಬೀಜಿಂಗ್ ವಿಶ್ವ ಮಹಿಳಾ ಸಮ್ಮೇಳನದ 25ನೇ ವಾರ್ಷಿಕೋತ್ಸವ ನಡೆಯಲಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.