ADVERTISEMENT

ಪೂರ್ವ ಲಡಾಖ್‌ | ಒಪ್ಪಂದದ ಸಮಗ್ರ ಜಾರಿಗೆ ಕ್ರಮ: ಚೀನಾ

ಪಿಟಿಐ
Published 26 ಡಿಸೆಂಬರ್ 2024, 15:11 IST
Last Updated 26 ಡಿಸೆಂಬರ್ 2024, 15:11 IST
<div class="paragraphs"><p>ಭಾರತ-ಚೀನಾ</p></div>

ಭಾರತ-ಚೀನಾ

   

(ಐಸ್ಟೋಕ್ ಚಿತ್ರ)

ಬೀಜಿಂಗ್‌: ಪೂರ್ವ ಲಡಾಖ್‌ನಲ್ಲಿ ಮೂಡಿರುವ ಅನಿಶ್ಚಿತತೆಗೆ ತೆರೆ ಎಳೆಯಲು ಭಾರತ–ಚೀನಾ ನಡುವಿನ ಒಪ್ಪಂದವನ್ನು ಉಭಯ ಸೇನೆಗಳು ‘ಪರಿಣಾಮಕಾರಿ ಮತ್ತು ಸಮಗ್ರ’ವಾಗಿ ಜಾರಿಗೊಳಿಸುತ್ತಿವೆ ಎಂದು ಚೀನಾ ರಕ್ಷಣಾ ಸಚಿವಾಲಯ ಗುರುವಾರ ತಿಳಿಸಿದೆ.

ADVERTISEMENT

ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಸಚಿವಾಲಯದ ವಕ್ತಾರ ಕರ್ನಲ್‌ ಝಾಂಗ್ ಕ್ಸಿಯಾಗಾಂಗ್ ಅವರು, ‘ಒಪ್ಪಂದದ ಜಾರಿ ಪ್ರಕ್ರಿಯೆ ತ್ವರಿತಗತಿಯಲ್ಲಿ ನಡೆದಿದೆ’ ಎಂದರು.

‘ಉಭಯ ದೇಶಗಳ ನಾಯಕರ ನಡುವಿನ ಒಪ್ಪಂದದಂತೆ, ರಾಜತಾಂತ್ರಿಕ ಮತ್ತು ಸೇನಾ ಮಾರ್ಗಗಳಲ್ಲಿ ಗಡಿ ಕುರಿತು ನಿರಂತರ ಸಂಪರ್ಕ ಹೊಂದಲಾಗಿದೆ’ ಎಂದು ತಿಳಿಸಿದರು. 

ಚೀನಾ ಮತ್ತು ಭಾರತ ನಡುವಣ ಬಾಂಧವ್ಯವನ್ನು ಸರಿದಾರಿಗೆ ತರುವುದು ಉಭಯ ದೇಶಗಳ ಸಮಾನ ಆಸಕ್ತಿಯಾಗಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.